ಮೈಸೂರು: ಎರಡು ತಲೆ, ನಾಲ್ಕು ಕಣ್ಣು, ಎರಡು ಬಾಯಿ ಇರುವ ವಿಚಿತ್ರ ಮೇಕೆ ಮರಿಯೊಂದು ನಂಜನಗೂಡು ತಾಲ್ಲೂಕಿನ ಕುರಹಟ್ಟಿ ಗ್ರಾಮದಲ್ಲಿ ಜನಿಸಿದೆ.
ಕುರಹಟ್ಟಿ ಗ್ರಾಮದ ರೈತ ರವೀಶ್ ಎಂಬುವವರು ಮನೆಯಲ್ಲಿ ಮೇಕೆಗಳನ್ನು ಪಾಲನೆ ಮಾಡುತ್ತಿದ್ದು, ಮೇಕೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ. ಅದರಲ್ಲಿ ಒಂದು ಮೇಕೆ ಮರಿಯು ಸಾಮಾನ್ಯವಾಗಿ ಜನಿಸಿದ್ದು, ಮತ್ತೊಂದು ಮರಿಗೆ ಎರಡು ತಲೆ, ನಾಲ್ಕು ಕಣ್ಣು, ಎರಡು ಕಿವಿ, ಎರಡು ಬಾಯಿ ಇದೆ.
ಇದನ್ನು ಓದಿ :ವಾಣಿಜ್ಯ ಎಲ್‌ಪಿಜಿ ಬಳಕೆಯ ಸಿಲಿಂಡರ್ ಬೆಲೆ 51 ರೂ ಇಳಿಕೆ
ಆದರೆ ದೇಹ ಮಾತ್ರ ಸಾಮಾನ್ಯವಾಗಿ ಇದ್ದು ಮೇಕೆ ಮರಿಯು ಆರೋಗ್ಯವಾಗಿದೆ. ಹಾಲು ಕುಡಿಯುವಾಗ ಎರಡು ಬಾಯಿಯಿಂದಲೂ ಕುಡಿಯುತ್ತದೆ ಎಂದು ಮೇಕೆ ಮಾಲೀಕ ರವೀಶ್ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ವಿಚಿತ್ರವಾಗಿ ಜನಿಸಿರುವ ಮೇಕೆಮರಿ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.





