Mysore
28
few clouds

Social Media

ಬುಧವಾರ, 21 ಜನವರಿ 2026
Light
Dark

ಭಾರತೀನಗರ | ಧರ್ಮಸ್ಥಳ ಸತ್ಯ ಯಾತ್ರೆಯಲ್ಲಿ ಪಾಲ್ಗೊಳ್ಳಲು ನಿಖಿಲ್‌ಕುಮಾರ್‌ಸ್ವಾಮಿ ಕರೆ

ಭಾರತೀನಗರ : ಸಮಾಜ ಘಾತಕರು, ದುಷ್ಟ ಶಕ್ತಿಗಳು ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ಕಳಂಕ ತರಲು ಹೊರಟಿದೆ. ಅದನ್ನು ತೊಳೆಯಲು ಧರ್ಮಸ್ಥಳ ಸತ್ಯಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಾ.ದಳ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಇಲ್ಲಿನ ದೊಡ್ಡರಸಿನಕೆರೆ ಸಮೀಪದ ಚಿಕ್ಕಮರೀಗೌಡನದೊಡ್ಡಿ ಗ್ರಾಮದಲ್ಲಿ ಆಯೋಜಿಸಲಾಗಿರುವ ದೊಡ್ಡರಸಿನಕೆರೆ ಮುಟ್ಟನಹಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ (ಡಿಎಂಪಿಎಲ್) ಚಾಲನೆ ನೀಡಿ ಅವರು ಮಾತನಾಡಿದರು.

ಧರ್ಮಸ್ಥಳ ದೇಶ ವಿದೇಶಗಳಿಂದ ಕೋಟ್ಯಂತರ ಭಕ್ತಾಧಿಗಳನ್ನು ಹೊಂದಿದೆ. ಇದಕ್ಕೆ ಅಪಮಾನ ಹೊಡ್ಡಲು ಮುಂದಾಗಿದ್ದಾರೆ. ಈ ಕಳಂಕವನ್ನು ಹೋಗಲಾಡಿಸಲು ನಮ್ಮ ಜಾ.ದಳ ಪಕ್ಷದ ಕಡೆಯಿಂದ ಕಾರ್ಯಕರ್ತರು, ಅಭಿಮಾನಿಗಳು ೨೫ ಸಾವಿರಕ್ಕೂ ಹೆಚ್ಚು ಮಂದಿ ಧರ್ಮಸ್ಥಳ ಸತ್ಯಯಾತ್ರೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.

ಚಿಕ್ಕವಯಸ್ಸಿನಿಂದಲೂ ಮಂಜುನಾಥಸ್ವಾಮಿ, ಅಣ್ಣಪ್ಪಸ್ವಾಮಿಯ ಸ್ಮರಣೆಯಲ್ಲಿಯೇ ಲಕ್ಷಾಂತರ ಜನ ಜೀವಿಸುತ್ತಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮುಂಜುನಾಥ ನೆಲೆಸಿರುವ ಕ್ಷೇತ್ರಕ್ಕೆ ಕಳಂಕ ತರಲು ಯತ್ನಿಸಿದ್ದಾರೆ. ಇದನ್ನು ತೊಡೆದು ಹಾಕುವ ದೃಷ್ಟಿಯಿಂದ ಸತ್ಯಯಾತ್ರೆಯ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಎಲ್ಲಾ ಭಕ್ತರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳ ಸತ್ಯಯಾತ್ರೆಯಲ್ಲಿ ಯಾವುದೇ ರಾಜಕೀಯ ಬೆರಸುವಂತದ್ದಲ್ಲ, ಪಕ್ಷಾತೀತವಾಗಿ ಮಾಡುವಂತದ್ದಾಗಿದೆ. ೭೦೦, ೮೦೦ ವರ್ಷಗಳ ಇತಿಹಾಸ ಇರುವಂತಹ ಧರ್ಮಸ್ಥಳಕ್ಕೆ ಬಂದಿರುವ ಕಳಂಕವನ್ನು ತೊಳೆದು ಹಾಕುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲು ಧರ್ಮಸ್ಥಳ ಸತ್ಯಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಪಕ್ಷಾತೀತವಾಗಿ ಎಲ್ಲರೂ ಭಾಗವಹಿಸಬೇಕೆಂದು ಹೇಳಿದರು.

ಜಾ.ದಳ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಮಾದನಾಯಕನಹಳ್ಳಿ ರಾಜಣ್ಣ, ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ರಾಜ್ಯ ಘಟಕದ ಕಾರ್ಯದರ್ಶಿ ಕೆಸ್ತೂರು ಬಿಳಿಯಪ್ಪ, ಮನ್ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರು, ಅಪ್ಪು ಪಿ.ಗೌಡ, ಗುರುದೇವರಹಳ್ಳಿ ಅರವಿಂದ್, ಕರಡಕೆರೆ ಹನುಮಂತೇಗೌಡ , ಡಿ.ಎ.ಕೆರೆ ಪ್ರದೀಪ್, ಚಿಕ್ಕಹುಚ್ಚೇಗೌಡ, ಸೊಸೈಟಿ ಅಧ್ಯಕ್ಷ ಮಹೇಶ್,ಕಾರ್ಯಕ್ರಮದ ಆಯೋಜಕರಾದ ನಂದನ್, ಹರ್ಷಿತ್‌ಗೌಡ, ಸುದರ್ಶನ, ಅಭಿಷೇಕ್, ನಿಶಾಂತ್, ಗೌತಮ್, ಬಸವರಾಜು, ಶಿವಲಿಂಗ, ಸಂದೀಪ್, ಕಿರಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!