Mysore
15
few clouds

Social Media

ಬುಧವಾರ, 21 ಜನವರಿ 2026
Light
Dark

ಅರಸಯ್ಯನಾದ ಮಹಾಂತೇಶ್: ಸೆ.19ಕ್ಕೆ ‘ಪ್ರೇಮ ಪ್ರಸಂಗ’

ಪುನೀತ್‍ ರಾಜಕುಮಾರ್ ನಿರ್ಮಾಣದ ‘ಫ್ರೆಂಚ್‍ ಬಿರಿಯಾನಿ’ ಚಿತ್ರದಲ್ಲಿನ ವಿಭಿನ್ನ ಪಾತ್ರ ಮತ್ತು ಪಾತ್ರ ಪೋಷಣೆಯ ಮೂಲಕ ಗಮನ ಸೆಳೆದವರು ಮಹಾಂತೇಶ್‍ ಹಿರೇಮಠ. ಇದೀಗ ಅವರು ‘ಅರಸಯ್ಯನ ಪ್ರೇಮ ಪ್ರಸಂಗ’ ಎಂಬ ಚಿತ್ರಕ್ಕೆ ಹೀರೋ ಆಗಿದ್ದಾರೆ. ಈ ಚಿತ್ರವು ಸೆ.19ರಂದು ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಯುವ ರಾಜಕುಮಾರ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಮೇಘಶ್ರೀ ರಾಜೇಶ್ ನಿರ್ಮಾಣದ ಈ ಚಿತ್ರಕ್ಕೆ ಜೆ.ವಿ.ಆರ್ ದೀಪು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಹಾಂತೇಶ್‍ಗೆ ನಾಯಕಿಯಾಗಿ ರಶ್ಮಿತ R ಗೌಡ ನಟಿಸಿದ್ದು, ಪಿ.ಡಿ. ಸತೀಶ್‍, ಜಹಾಂಗೀರ್‍, ವಿಜಯ್‍ ಚೆಂಡೂರು, ರಾಘು ರಾಮನಕೊಪ್ಪ ಮುಂತಾದವರು ನಟಿಸಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ಮಹಾಂತೇಶ್‍, ‘ನಾನು ಜನರಿಗೆ ಪರಿಚಯವಾಗಿದ್ದೇ ಪುನೀತ್ ರಾಜಕುಮಾರ್ ನಿರ್ಮಾಣದ ‘ಫ್ರೆಂಚ್ ಬಿರಿಯಾನಿ’ ಚಿತ್ರದ ಮೂಲಕ. ಇಂದು ಪುನೀತ್ ಅವರ ಕುಟುಂಬದ ಯುವ ರಾಜಕುಮಾರ್ ನಾನು ನಾಯಕನಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಅನಾವರಣ ಮಾಡಿದ್ದು ಸಂತೋಷವಾಗಿದೆ. ನಾವು ಕೆಲವು ಸ್ನೇಹಿತರು ಸೇರಿ ಈ ಸಿನಮಾದ ಕುರಿತು ಆಲೋಚಿಸುತ್ತಿದ್ದಾಗ,‌‌ ನಾನು ಈ ಚಿತ್ರದ ನಾಯಕ ಅಂತ ನಿರ್ಧಾರವಾಗಿರಲಿಲ್ಲ. ನಂತರ ಎಲ್ಲರೂ ನೀನೇ ಈ ಪಾತ್ರ ಮಾಡು ಎಂದರು. ನಂತರ ನಮ್ಮ ಚಿತ್ರದ ನಿರ್ಮಾಣಕ್ಕೆ ರಾಜೇಶ್ ಅವರು ಮುಂದಾದರು. ಒಳ್ಳೆಯ ಕಲಾವಿದರ ಹಾಗೂ ತಂತ್ರಜ್ಞರ ತಂಡದ ಚಿತ್ರ ಚೆನ್ನಾಗಿ ಮೂಡಿಬಂದಿದೆ’ ಎಂದರು.

ನಿರ್ದೇಶಕ ದೀಪು, ‘ಲೂಸಿಯಾ’ ಪವನ್ ಕುಮಾರ್ ಅವರ ಬಳಿ ಕೆಲಸ ಮಾಡಿದ್ದರಂತೆ. ‘ನಿರ್ದೇಶಕನಾಗಿ ಇದು ಮೊದಲ ಚಿತ್ರ. ಇದೊಂದು ಗ್ರಾಮೀಣ ಸೊಗಡಿನ ಪ್ರೇಮಕಥೆ. ಚಿತ್ರ ಸೆಪ್ಟೆಂಬರ್ 19 ರಂದು ತೆರೆಗೆ ಬರಲಿದೆ’ ಎಂದರು.

‘ಅರಸಯ್ಯನ ಪ್ರೇಮ ಪ್ರಸಂಗ’ ಚಿತತ್ರಕ್ಕೆ ಪ್ರವೀನ್‍ ಮತ್ತು ಪ್ರದೀಪ್‍ ಬಿ.ವಿ ಸಂಗಿತ ಸಂಯೋಜಿಸಿದ್ದು, ಗುರುಪ್ರಸಾದ್‍ ನಾರ್ನಾಡ್‍ ಛಾಯಾಗ್ರಹಣವಿದೆ.

Tags:
error: Content is protected !!