Mysore
21
mist

Social Media

ಬುಧವಾರ, 14 ಜನವರಿ 2026
Light
Dark

ಓದುಗರ ಪತ್ರ | ವಿವಾದಗಳ ನಗದೀಕರಣ

ಓದುಗರ ಪತ್ರ

ಕಾಶ್ಮೀರ ಪಂಡಿತರ ಸಮಸ್ಯೆಯ ಸುತ್ತ ಹೆಣೆದ ವಿವಾದಾತ್ಮಕ ‘ಕಾಶ್ಮೀರ ಫೈಲ್ಸ್’ ಎಂಬ ಚಲನಚಿತ್ರ ಹಿಟ್ ಅದ ತಕ್ಷಣ ‘ಫೈಲ್ಸ್’ ಎಂಬ ಬಾಲಂಗೋಚಿಯನ್ನು ಸೇರಿಸಿ ಚಿತ್ರ ತಯಾರಿಸುವ ಖಯಾಲಿ ಹೆಚ್ಚಾಗುತ್ತಿದೆ.

‘ಕೇರಳ ಫೈಲ್ಸ್’ , ‘ಬೆಂಗಾಲ್ ಫೈಲ್ಸ್’ , ‘ಉದಯಪುರ ಫೈಲ್ಸ್’ ನಂತರ ಈಗ ‘ಧರ್ಮ ಸ್ಥಳ ಫೈಲ್ಸ್’ , ‘ಬುರುಡೆ ಫೈಲ್ಸ್’ ಹೆಸರಿನಲ್ಲಿ ಚಿತ್ರ ತಯಾರಿಸಲು ಕೆಲವರು ಮುಂದೆ ಬಂದಿದ್ದಾರಂತೆ. ಸದ್ಯ‘ ಮುಡಾ ಫೈಲ್ಸ್’ ಹೆಸರಿನಲ್ಲಿ ಯಾರೂ ಚಿತ್ರ ನಿರ್ಮಾಣಕ್ಕೆ ಮುಂದಾಗಿಲ್ಲ. ಅವರ ಉದ್ದೇಶ ಏನೇ ಇದ್ದರೂ ವಿವಾದಗಳನ್ನು ನಗದೀಕರಿಸಿಕೊಳ್ಳುವ ಈ ಖಯಾಲಿ ಸಮಾಜದ ಸ್ವಾಸ್ಥ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆ
ಎನ್ನಲಾಗದು.

೧೯೭೨ ರ ಬಂಗ್ಲಾ ವಿಮೋಚನೆಯ ನಂತರ ಐ.ಎಸ್. ಜೋಹರ್, ‘ಜೋಯ್ ಬಂಗ್ಲಾ’ ಹೆಸರಿನಲ್ಲಿ ಚಿತ್ರ ತಯಾರಿಸಿ ಈ ಟ್ರೆಂಡ್ಗೆ ಬುನಾದಿ ಹಾಕಿದ್ದು ನೆನಪಿಗೆ ಬರುತ್ತದೆ.

-ರಮಾನಂದ ಶರ್ಮಾ, ಬೆಂಗಳೂರು

Tags:
error: Content is protected !!