Mysore
18
few clouds

Social Media

ಶನಿವಾರ, 24 ಜನವರಿ 2026
Light
Dark

ನಾನು ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

dk shivkumar

ಬೆಂಗಳೂರು: ನಾನು ಸತ್ಯ ಹೇಳಿದರೆ ಕೆಲವರು ಸಹಿಸುವುದಿಲ್ಲ. ಹೀಗಾಗಿ ಪಕ್ಷದ ವಕ್ತಾರರಿಂದ ಹೇಳಿಕೆ ಕೊಡಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮೈಸೂರು ದಸರಾ ಕುರಿತು ತಾವು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, ನಾನು ಕೆಲವು ಸತ್ಯಗಳನ್ನು ಹೇಳಿದರೆ ಕೆಲವರು ಸಹಿಸುವುದಿಲ್ಲ. ಪ್ರಮೋದ ದೇವಿಯವರಾಗಲೀ, ಯದುವೀರ್ ಆಗಲೀ, ವಿಧಾನಸಭೆಯಲ್ಲಾಗಲೀ ನಾನು ಆಡುವ ಮಾತುಗಳಲ್ಲಿ ತಪ್ಪು ಕಂಡುಹಿಡಿಯುವುದೇ ದೊಡ್ಡ ಕೆಲಸವಾಗಿದೆ.

ನನ್ನ ವಿಚಾರವಾಗಿ ಏನೋ ನಡೆಯುತ್ತಿದೆ. ಅದಕ್ಕಾಗಿ ನಾನು ಮಾತನಾಡದೇ ಇರುವುದೇ ಉತ್ತಮ. ಪಕ್ಷದ ಬೇರೆ ನಾಯಕರು ಹಾಗೂ ವಕ್ತಾರರಿದ್ದಾರೆ. ಅವರಿಂದ ಮಾತನಾಡಿಸುವುದೇ ಸೂಕ್ತ ಎಂದರು.

ಡಿ.ಕೆ.ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಗಳು ತೀವ್ರ ಸಂಚಲನ ಸೃಷ್ಟಿಸಿದ್ದು, ಭಾರೀ ವಿವಾದ ಮೂಡಿಸಿವೆ. ಧರ್ಮಸ್ಥಳದ ಕುರಿತಂತೆ ಎಸ್‍ಐಟಿ ತನಿಖೆ ಪ್ರಗತಿಯಲ್ಲಿರುವಾಗಲೇ ಡಿ.ಕೆ.ಶಿವಕುಮಾರ್ ಷಡ್ಯಂತ್ರ ನಡೆದಿದೆ ಎಂದು ಹೇಳಿ ತನಿಖೆಯ ದಿಕ್ಕನ್ನು ಬದಲಾಯಿಸಿದರು. ಚಾಮುಂಡೇಶ್ವರಿ ದೇವಸ್ಥಾನ ಕೇವಲ ಹಿಂದೂಗಳ ಆಸ್ತಿಯಲ್ಲ ಎಂದು ಹೇಳುವ ಮೂಲಕ ಮತ್ತಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದು ಬಿಜೆಪಿಯವರ ಕೆಂಗಣ್ಣಿಗೂ ಗುರಿಯಾಗಿದ್ದು ತೀಕ್ಷ್ಣ ಪ್ರತಿಕ್ರಿಯೆಗಳು ಕಂಡು ಬರುತ್ತಿವೆ.

ಈ ಸಂಬಂಧಪಟ್ಟಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಈ ವಿಚಾರವಾಗಿ ಮಾತನಾಡದೆ ಇರುವುದೇ ಕ್ಷೇಮ ಎಂದು ಪ್ರತಿಕ್ರಿಯಿಸಿದ್ದಾರೆ. ದಸರಾ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅನಗತ್ಯ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಡಿ.ಕೆ.ಶಿವಕುಮಾರ್ ಬಂದಂತಿದೆ.

Tags:
error: Content is protected !!