Mysore
27
scattered clouds

Social Media

ಸೋಮವಾರ, 12 ಜನವರಿ 2026
Light
Dark

ಧರ್ಮಸ್ಥಳ ಪ್ರಕರಣ: ಮುಂದುವರಿದ ಮಾಸ್ಕ್‌ಮ್ಯಾನ್‌ ಚಿನ್ನಯ್ಯ ವಿಚಾರಣೆ

ಮಂಗಳೂರು: ಧರ್ಮಸ್ಥಳ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಾಸ್ಕ್‌ಮ್ಯಾನ್‌ ಚಿನ್ನಯ್ಯನ ವಿಚಾರಣೆ ಮುಂದುವರಿದಿದೆ.

ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟಿದ್ದಾಗಿ ಹೇಳಿದ್ದ ಮಾಸ್ಕ್‌ಮ್ಯಾನ್‌ ಚಿನ್ನಯ್ಯನನ್ನು ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಚಿನ್ನಯ್ಯ ತಪ್ಪೊಪ್ಪಿಗೆ ಕೇಸ್‌ನಲ್ಲಿ ಇದೀಗ ಆತನ ಜೊತೆಗಿದ್ದ ವಕೀಲರನ್ನೇ ಸಾಕ್ಷಿಯನ್ನಾಗಿ ಎಸ್‌ಐಟಿ ಅಧಿಕಾರಿಗಳು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಸ್‌ಐಟಿ ಮಾಸ್ಕ್‌ಮ್ಯಾನ್‌ ವಕೀಲನ ಸಮ್ಮುಖದಲ್ಲಿಯೇ ಚಿನ್ನಯ್ಯನಿಂದ ಹೇಳಿಕೆ ದಾಖಲಿಸಿಕೊಂಡಿದೆ.

ಈ ನಿಟ್ಟಿನಲ್ಲಿ ಚಿನ್ನಯ್ಯನ ತಪ್ಪೊಪ್ಪಿಗೆ ಕೇಸ್‌ನಲ್ಲಿ ವಕೀಲರನ್ನೇ ಸಾಕ್ಷಿಯನ್ನಾಗಿ ಮಾಡಿದ್ದು, ಕೋರ್ಟ್‌ನಲ್ಲಿ ಕೂಡ ವಕೀಲರೇ ಸಾಕ್ಷಿ ಹೇಳಬೇಕಾದ ಅಗತ್ಯವಿದೆ.

Tags:
error: Content is protected !!