Mysore
14
few clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಸೌಜನ್ಯ ಪ್ರಕರಣ ಹೊರತುಪಡಿಸಿ ಉಳಿದೆಲ್ಲಾ ಆರೋಪ ಷಡ್ಯಂತ್ರವೇ: ಶಾಸಕ ಹರೀಶ್ ಗೌಡ ಆರೋಪ

harish gowda (2)

ಮೈಸೂರು: ಸೌಜನ್ಯ ಪ್ರಕರಣ ಹೊರತುಪಡಿಸಿ ಉಳಿದೆಲ್ಲಾ ಆರೋಪ ಷಡ್ಯಂತ್ರವೇ ಎಂದು ಕಾಂಗ್ರೆಸ್‌ ಶಾಸಕ ಹರೀಶ್‌ ಗೌಡ ಆರೋಪಿಸಿದ್ದಾರೆ.

ಧರ್ಮಸ್ಥಳ ವಿಚಾರ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೌಜನ್ಯ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಸೌಜನ್ಯಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಒತ್ತಾಯ. ಧರ್ಮಸ್ಥಳ ರಾಜ್ಯದ ಹಿಂದೂ ಶ್ರದ್ದಾ ಕೇಂದ್ರ. ನಮ್ಮ ಸರ್ಕಾರದ ದಿಟ್ಟ ನಿಲುವಿನಿಂದ ಎಸ್‌ಐಟಿ ರಚನೆ ಮಾಡಿತ್ತು. ಬಿಜೆಪಿ ಎಸ್‌ಐಟಿ ರಚನೆಯನ್ನೇ ವಿರೋದಿಸಿತ್ತು. ಇಂದು ಅದೆ ಎಸ್‌ಐಟಿ ತನಿಖೆಯಿಂದ ಧರ್ಮಸ್ಥಳ ಕಳಂಕ ಮುಕ್ತವಾಗಿದೆ. ಎಸ್‌ಐಟಿ ತನಿಖೆ ನಡೆಸದಿದ್ರೆ ಧರ್ಮಸ್ಥಳದ ಕಳಂಕ‌ ತೊಲಗುತ್ತಿರಲಿಲ್ಲ ಎಂದರು.

ಇನ್ನು ಲೇಖಕಿ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ಪ್ರತಾಪ್ ಸಿಂಹ ಆಕ್ಷೇಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪ್ರತಾಪ್ ಸಿಂಹನಿಗೆ ತಲೆ ಇದಿಯಾ.? ಈ ಹಿಂದೆ ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದಾಗ ಯಾಕೆ ವಿರೋಧ ಮಾಡಿಲ್ಲ. ಬಾನು ಮುಷ್ತಾಕ್ ಭಾರತ ದೇಶದವರಲ್ಲವಾ.? ಬೂಕರ್ ಪ್ರಶಸ್ತಿ ಪಡೆದ ಸಾಹಿತಿಗೆ ನಮ್ಮ ಸರ್ಕಾರ ಗೌರವಿಸುತ್ತಿದೆ. ಬಿಜೆಪಿ ಜಾತಿ-ಧರ್ಮಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ನಾವೊಬ್ಬರೆ ಹಿಂದೂಗಳು ಎಂಬಂತೆ ವರ್ತಿಸುತ್ತಾರೆ. ನಮಗೆ ಹಿಂದೂ ಧರ್ಮವನ್ನು ಹಡವಿಟ್ಟಿದ್ದಾರೆ ಎಂಬಂತೆ ನಡೆದುಕೊಳ್ಳುತ್ತಾರೆ. ಇಂತಹವರೆಲ್ಲ ಇರೋದು ಈ ರಾಜ್ಯದ ದುರ್ವಿಧಿ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tags:
error: Content is protected !!