Mysore
24
haze

Social Media

ಶನಿವಾರ, 03 ಜನವರಿ 2026
Light
Dark

ಓದುಗರ ಪತ್ರ: ಕೋಮು ದ್ವೇಷ ಹರಡುವುದು ನಿಲ್ಲಲಿ

ಓದುಗರ ಪತ್ರ

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ಮುಸ್ಲಿಂ ಯುವತಿಯರನ್ನು ಹಿಂದೂ ಯುವಕರು ಮದುವೆಯಾದರೆ ೫ ಲಕ್ಷ ರೂ. ಬಹುಮಾನ ಕೊಡುವುದಾಗಿ ಹೇಳಿಕೆ ನೀಡಿರುವುದು ಪರೋಕ್ಷವಾಗಿ ಕೋಮು ದ್ವೇಷವನ್ನು ಉಂಟುಮಾಡುವಂತಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಈ ರೀತಿ ಸಮಾಜದ ಸಾಮರಸ್ಯ ಕದಡುವ ಹೇಳಿಕೆ ನೀಡಿರುವುದು ಅವರ ಘನತೆಗೆ ತಕ್ಕುದಲ್ಲ. ಅವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇನ್ನು ಮುಂದೆ ಸಾಮರಸ್ಯ ಕದಡುವ ಹೇಳಿಕೆ ನೀಡದಂತೆ ತಾಕೀತು ಮಾಡುವುದು ಅಗತ್ಯವಾಗಿದೆ.

– ನಬಿ. ಆರ್.ಬಿ.ದೋಟಿಹಾಳ, ಕುಷ್ಟಗಿ ತಾ. ಕೊಪ್ಪಳ ಜಿಲ್ಲೆ

Tags:
error: Content is protected !!