ಕನ್ನಡ ಪರ ಹೋರಾಟಗಾರ, ಸ.ರ.ಸುದರ್ಶನ ರವರ ನಿಧನದ ಸುದ್ದಿ ಕೇಳಿ ತುಂಬಾ ಬೇಸರವಾಯಿತು. ಗೋಕಾಕ್ ಚಳವಳಿ ಸೇರಿದಂತೆ ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಅವರು ಆರಂಭದಿಂದ ಇಲ್ಲಿಯವರೆಗೂ ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯರಾಗಿದ್ದರು. ಅವರು ವಿದ್ಯಾರ್ಥಿಯಾಗಿದ್ದಾಗಲೇ ಚೇತನ ಕನ್ನಡ ಸಂಘ ಕಟ್ಟಿದ್ದರು.
ಮೈಸೂರು ವಿ ವಿ ಪ್ರಸಾರಾಂಗದ ಉಪನಿರ್ದೇಶಕರಾಗಿ ಇಂಗ್ಲಿಷ್-ಕನ್ನಡ ನಿಘಂಟು ರಚನೆ ಮಾಡಿದ್ದರು. ಮಹಾರಾಣಿ ಎನ್‌ಟಿಎಂ ಶಾಲೆಯನ್ನು ಉಳಿಸಲು ಹೋರಾಟ ನಡೆಸಿದ್ದರು. ಮೈಸೂರಿನಲ್ಲಿ ಕನ್ನಡದ ಧ್ವನಿಯಾಗಿದ್ದ ಚೇತನವೊಂದು ಕಣ್ಮರೆಯಾಗಿದೆ. ಇದು ಕನ್ನಡ ಭಾಷೆಗಾದ ನಷ್ಟ. ಅವರ ಹೋರಾಟ ಇನ್ನು ನೆನಪು ಮಾತ್ರ.
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು





