Mysore
18
scattered clouds

Social Media

ಭಾನುವಾರ, 25 ಜನವರಿ 2026
Light
Dark

ಓದುಗರ ಪತ್ರ: ರಸ್ತೆ ಗುಂಡಿ ಮುಚ್ಚಿಸಿ

ಓದುಗರ ಪತ್ರ

ಮೈಸೂರಿನ ಹೆಬ್ಬಾಳದಲ್ಲಿರುವ ಸೂರ್ಯ ಬೇಕರಿ ವೃತ್ತದ ಸಮೀಪದಲ್ಲಿ ರುವ ಎರಡನೇ ಅಡ್ಡ ರಸ್ತೆಯಲ್ಲಿನ ಮ್ಯಾನ್‌ಹೋಲ್ ಬಳಿ ಡಾಂಬರು ಕುಸಿದು ಗುಂಡಿ ನಿರ್ಮಾಣವಾಗಿ ಹಲವಾರು ತಿಂಗಳುಗಳೇ ಕಳೆದರೂ ಪಾಲಿಕೆಯವರು ದುರಸ್ತಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

ಕಳೆದ ವಾರ ಸ್ಥಳೀಯ ನಿವಾಸಿಗಳೇ ಸೇರಿ ಈ ಗುಂಡಿಗೆ ಮಣ್ಣುತುಂಬಿದ್ದರು. ಆದರೆ, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಣ್ಣು ಸಂಪೂರ್ಣವಾಗಿ ಕೊಚ್ಚಿ ಹೋಗಿ ಗುಂಡಿ ನಿರ್ಮಾಣವಾಗಿ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ. ಈ ಅಡ್ಡರಸ್ತೆ ಕಿರಿದಾದ ಕಾರಣ ಪಾದಚಾರಿಗಳು, ದಾರಿಹೋಕರು ಮತ್ತು ದ್ವಿಚಕ್ರ ವಾಹನ ಸವಾರರು ತಿರುವಿನಲ್ಲಿರುವ ಈ ಗುಂಡಿಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಗುಂಡಿಯನ್ನು ಮುಚ್ಚುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿದೆ.

– ಆರ್. ಯಶಸ್, ಮೈಸೂರು

Tags:
error: Content is protected !!