Mysore
22
clear sky

Social Media

ಬುಧವಾರ, 21 ಜನವರಿ 2026
Light
Dark

ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ ವಿಚಾರ: ಡಿ.ಕೆ. ಬ್ರದರ್‌ ಹೇಳಿದ್ದೇನು?

D.K. Shivakumar is Not Someone Who Shows Off Power: Former MP D.K. Suresh

ಬೆಂಗಳೂರು: ಕೆ.ಎನ್‌.ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಡುವ ನಿರ್ಧಾರ ಕೈಗೊಂಡಿದ್ದು ಹೈಕಮಾಂಡ್‌. ಹೀಗಾಗಿ ಡಿ.ಕೆ.ಶಿವಕುಮಾರ್‌ ವಿರುದ್ಧ ಕೇಳಿ ಬರುತ್ತಿರುವ ಅನುಮಾನಗಳು ಅಪ್ರಸ್ತುತ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ವಿಶ್ಲೇಷಕರು ಯಾವ ರೀತಿ ಬೇಕಾದರೂ ಹೇಳಲಿ. ಆದರೆ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯಾರ ಜೊತೆಯೂ ಚರ್ಚೆ ಮಾಡಿಲ್ಲ ಎಂದರು.

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಅವರ ಬೆಂಬಲಿಗರನ್ನು ಗುರಿಮಾಡಲಾಗುತ್ತಿದೆ ಎಂಬುದು ಸರಿಯಲ್ಲ. ಕೆ.ಎನ್‌.ರಾಜಣ್ಣ ಖುದ್ದು ದೆಹಲಿಗೆ ಹೋಗಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಇಲ್ಲಿ ಮುಚ್ಚುಮರೆ ಅಗತ್ಯವಿಲ್ಲ ಎಂದರು.

ಬಿಜೆಪಿ ನಾಯಕರು ಧರ್ಮಸ್ಥಳ ಉಳಿಸಿ ಎಂದು ಯಾತ್ರೆ ನಡೆಸುತ್ತಿರುವುದು ರಾಜಕೀಯ ಕಾರಣಕ್ಕೆ. ಧರ್ಮಸ್ಥಳಕ್ಕೆ ತಮ್ಮದೇ ಆದ ಸ್ಥಾನಮಾನವಿದೆ. ಅಪಾರ ಭಕ್ತ ಸಮೂಹವಿದೆ. ಕಳೆದ ಎರಡು ತಿಂಗಳಿನಿಂದಲೂ ಇದರ ಚರ್ಚೆ ನಡೆಯುತ್ತಿದೆ ಎಂದರು.

Tags:
error: Content is protected !!