ಹೊಸದಿಲ್ಲಿ : ದೇಶ ವಿಭಜನೆಯ ಕರಾಳ ನೆನಪಿನ ದಿನವನ್ನು ಗುರುತಿಸಲು, NCERT ಶಾಲೆಗಳಿಗೆ ವಿಶೇಷ ಶೈಕ್ಷಣಿಕ ಪಠ್ಯವನ್ನು ಅನ್ನು ಪರಿಚಯಿಸಿದ್ದು, ದೇಶ ವಿಭಜನೆಗೆ ಮೊಹಮ್ಮದ್ ಅಲಿ ಜಿನ್ನಾ, ಕಾಂಗ್ರೆಸ್ ಮತ್ತು ಅಂದಿನ ವೈಸ್‌ರಾಯ್ ಮೌಂಟ್ ಬ್ಯಾಟನ್ ಕಾರಣ ಎಂದು ಪಠ್ಯದಲ್ಲಿ ವಿವರಿಸಿದೆ.
ವಿಭಜನೆಯ ಬಳಿಕ ಕಾಶ್ಮೀರ ವಿವಾದ ಶುರುವಾಯಿತು. ಇದು ಇಂದಿಗೂ ದೇಶದ ವಿದೇಶಾಂಗ ನೀತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಕಾಶ್ಮೀರ ವಿವಾದವನ್ನು ಮುಂದೆ ಇಟ್ಟುಕೊಂಡು ಈಗಲೂ ಕೆಲ ರಾಷ್ಟ್ರಗಳು ಪಾಕಿಸ್ತಾನಕ್ಕೆ ನೆರವು ನೀಡುತ್ತಿವೆ ಎಂದು ವಿವರಿಸಿದೆ.
“ಆಗಸ್ಟ್ 15, 1947 ರಂದು, ಭಾರತ ವಿಭಜನೆಯಾಯಿತು. ಆದರೆ ಇದು ಯಾವುದೇ ಒಬ್ಬ ವ್ಯಕ್ತಿಯ ಕೃತ್ಯವಲ್ಲ. ಭಾರತದ ವಿಭಜನೆಗೆ ಕಾರಣವಾದ ಮೂರು ಅಂಶಗಳಿದ್ದವು: ಅದನ್ನು ಒತ್ತಾಯಿಸಿದ ಜಿನ್ನಾ; ಎರಡನೆಯದಾಗಿ ಅದನ್ನು ಒಪ್ಪಿಕೊಂಡ ಕಾಂಗ್ರೆಸ್ ಮತ್ತು ಮೂರನೆಯದಾಗಿ, ಅದನ್ನು ಜಾರಿಗೆ ತಂದ ಮೌಂಟ್ ಬ್ಯಾಟನ್,” ಎಂದು NCERT ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.
ವಿಭಜನೆಯ ದೀರ್ಘಕಾಲೀನ ಪರಿಣಾಮವನ್ನು ಪಠ್ಯದಲ್ಲಿ ಎತ್ತಿ ತೋರಿಸಲಾಗಿದೆ. ವಿಭಜನೆ ವೇಳೆ ದೇಶದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಭಾರತ ನಿಜಕ್ಕೂ ಯುದ್ಧ ಭೂಮಿಯಾಗಿತ್ತು. ಗಾಂಧಿ ಅವರು ವಿಭಜನೆಯನ್ನು ವಿರೋಧಿಸಿದ್ದರು, ಹಿಂಸಾಚಾರದ ಮೂಲಕ ಕಾಂಗ್ರೆಸ್ ನಿರ್ಧಾರವನ್ನು ವಿರೋಧಿಸುವಲ್ಲಿ ಅವರು ವಿಫಲರಾದರೂ ಎಂದು ಹೇಳಲಾಗಿದೆ.
6–8 ತರಗತಿಗಳು ಮತ್ತು 9–12 ತರಗತಿಗಳಿಗೆ ಪ್ರತ್ಯೇಕ ಪಠ್ಯಗಳನ್ನು ಎನ್‌ಸಿಇಆರ್‌ಟಿ ಸಿದ್ಧಪಡಿಸಿದೆ. ದೇಶ ವಿಭಜನಗೆಯ ಕರಾಳ ನೆನಪಿನ ದಿನದ ಅಂಗವಾಗಿ 2021ರಲ್ಲಿ ಪ್ರಧಾನಿ ಮೋದಿ ಅವರ ಸಂದೇಶದೊಂದಿಗೆ ಈ ಎರಡು ಪುಸ್ತಕಗಳು ಆರಂಭಗೊಳ್ಳುತ್ತವೆ.





