Mysore
29
light rain

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಕೃಷ್ಣ ಜನ್ಮಾಷ್ಟಮಿ : ರಾಧಾಕೃಷ್ಣರ ವೇಷದಲ್ಲಿ ಕಂಗೊಳಿಸಿದ ಚಿಣ್ಣರು

Radhe

ಮೈಸೂರು :  ನಗರದಾದ್ಯಂತ ಶನಿವಾರ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಸರಳವಾಗಿ ಸಂಭ್ರಮದಿಂದ ಆಚರಿಸಲಾಯಿತು.

ನಗರದ ಇಸ್ಕಾನ್‌ ಟೆಂಪಲ್‌, ವೇಣುಗೋಪಾಲಸ್ವಾಮಿ ದೇವಾಲಯ ಸೇರಿದಂತೆ ಶ್ರೀಕೃಷ್ಣ ದೇಗುಲಗಳ್ಲಲಿ ವಿಶೇಷ ಪೂಜೆಗಳು ನೆರವೇರಿದವು. ಹಿಂದೂಗಳು ತಮ್ಮ ತಮ್ಮ ಮನೆಗಳಲ್ಲಿ ಸರಳವಾಗಿ ಅಷ್ಟಮಿ ಆಚರಣೆ ಮಾಡಿದರು.

ಮನೆಯಲ್ಲಿರುವ ಪುಟ್ಟ ಮಕ್ಕಳಿಗೆ ಕೃಷ್ಣ, ರಾಧೆಯ ವೇಷಭೂಷಣ ತೊಡಿಸಿ ಪೋಷಕರು ಸಂಭ್ರಮಿಸಿದರು. ಕೃಷ್ಣನ ವಿಗ್ರಹಗಳಿಗೆ ಪೂಜೆ ಸಲ್ಲಿಸಿ, ವಿವಿಧ ರೀತಿಯ ಚಕ್ಕುಲಿ, ಕೋಡುಬಳೆ ಮುಂತಾದ ತಿಂಡಿ, ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿದರು. ಮಧ್ಯಾಹ್ನ ಸಿಹಿಯೂಟ ಸವಿದರು.

ನಗರದ ಯಾದವಗಿರಿಯಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಕೂರ್ಗಳ್ಳಿಯಲ್ಲಿರುವ ವಾಸವಿ ಕಾನ್ವೆಂಟ್‌ಶಾಲೆ, ರೂಪನಗರದ ದೀಪಾ ಕಾನ್ವೆಂಟ್‌ ಸೇರಿದಂತೆ ನಗರದ ಅನೇಕ ಕಾನ್ವೆಂಟ್ ಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನಡೆಯಿತು.

Tags:
error: Content is protected !!