Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮೈಸೂರು | 7 ಮಂದಿ ಅಂತರರಾಜ್ಯ ಡಕಾಯಿತರ ಬಂಧನ

mysuru police (1)mysuru police (1)

ಮೈಸೂರು : ಕಳೆದ ತಿಂಗಳು ಬೆಳ್ಳಿ ಆಭರಣಗಳನ್ನು ತಯಾರು ಮಾಡುವ ಫ್ಯಾಕ್ಟರಿಯಲ್ಲಿ ಡಕಾಯಿತಿ ಮಾಡಿದ್ದ ಏಳು ಮಂದಿ ನೆಟೋರಿಯಸ್ ಅಂತಾರಾಜ್ಯ ಡಕಾಯಿತರನ್ನು ಮೈಸೂರು ನಗರ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್ ರಾಜ್ಯದಲ್ಲಿ ದೊಡ್ಡ ನೆಟೋರಿಯಸ್ ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಬಂಧಿಸಿರುವ ನಗರ ಪೊಲೀಸರ ಕಾರ್ಯಕ್ಕೆ ಗುಜರಾತ್ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಡಕಾಯಿತರ ಬಂಧನದಿಂದಾಗಿ ಮುಂದಿನ ದಿನಗಳಲ್ಲಿ ನಡೆಯಬಹುದಾಗಿದ್ದ ದುಷ್ಕೃತ್ಯಗಳನ್ನು ತಪ್ಪಿಸಿದಂತಾಗಿದೆ.

ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ಬೆಳ್ಳಿ ಆಭರಣ ತಯಾರಿಸುವ ಫ್ಯಾಕ್ಟರಿಯಲ್ಲಿನ ದರೋಡೆ ಪ್ರಕರಣ ಸಂಬಂಧ ೧೮,೮೦,೦೦೦ ರೂ. ಮೌಲ್ಯದ ೧೬ ಕೆ.ಜಿ.ಬೆಳ್ಳಿ ಪದಾರ್ಥ, ಕೃತ್ಯಕ್ಕೆ ಬಳಸಿದ್ದ ೨ ಕಾರು, ೧ ಪಿಸ್ತೂಲು, ೯ ಜೀವಂತ ಗುಂಡುಗಳನ್ನು ವಶಪಡೆಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ತಿಳಿಸಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ ೨೮ ರಂದು ನಡೆದ ಪ್ರಕರಣವನ್ನು ಆರಂಭದಲ್ಲಿ ಕಳ್ಳತನ ಎಂದು ತಿಳಿಯಲಾಗಿತ್ತು. ಆದರೆ ಪ್ರಕರಣದಲ್ಲಿ ೭ ಜನ ಭಾಗಿಯಾಗಿರುವುದು ತಿಳಿದ ನಂತರ ದರೋಡೆ ಪ್ರಕರಣ ದಾಖಲಿಸಲಾಗಿದೆ. ಡಕಾಯಿತರು ಅಂದು ರಾತ್ರಿ ೧.೪೫ ರಿಂದ ಬೆಳಗಿನ ಜಾವ ೪.೫೦ರ ವರೆಗೂ ೩೫೦ ಕೆ.ಜಿ.ಬೆಳ್ಳಿ ಇದ್ದ ಲಾಕರ್ ಒಡೆಯಲು ಪ್ರಯತ್ನ ಮಾಡಿ ವಿಫಲರಾಗಿದ್ದರು.

ಬಳಿಕ ಕೈಗೆ ಸಿಕ್ಕ ಬೆಳ್ಳಿ ಪದಾರ್ಥಗಳನ್ನು ದರೋಡೆ ಮಾಡಿದ್ದರು. ಈ ಸಂಬಂಧ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ವಿಶೇಷ ತಂಡವು ವಿವಿಧ ವೈಜ್ಞಾನಿಕ ಸುಳಿವುಗಳ ಆಧಾರದ ಮೇರೆಗೆ ಇಬ್ಬರು ಆರೋಪಿಗಳನ್ನು ಗುಜರಾತ್ ರಾಜ್ಯದಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿತು. ಅವರು ನೀಡಿದ ಮಾಹಿತಿ ಮೇರೆಗೆ ಮೈಸೂರಿನಲ್ಲಿ ಒಬ್ಬ ಹಾಗೂ ಬೆಂಗಳೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಈವರೆಗೆ ಒಟ್ಟು ೬ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಗುಜರಾತ್ ರಾಜ್ಯದ ೫ ಹಾಗೂ ಮಧ್ಯಪ್ರದೇಶದ ಇಬ್ಬರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಚಾಲಕನೇ ಮಾಸ್ಟರ್ ಮೈಂಡ್ 
ಪ್ರಕರಣದಲ್ಲಿ ಫ್ಯಾಕ್ಟರಿಯ ಮಾಲೀಕನ ಕಾರು ಚಾಲಕನೇ ಮಾಸ್ಟರ್ ಮೈಂಡ್ ಆಗಿದ್ದಾನೆ. ಈತ ಗುಜರಾತ್‌ನ ಪ್ರಮುಖ ನಟೋರಿಯಸ್ ದರೋಡೆಕೋರನಾಗಿದ್ದ ಎ-೨ ಆರೋಪಿಯೊಂದಿಗೆ ಸಂಚು ರೂಪಿಸಿ ಎ-೩ ರಿಂದ ಎ-೭ ರವರೊಂದಿಗೆ ಸೇರಿಕೊಂಡು ಫ್ಯಾಕ್ಟರಿಯಲ್ಲಿ ದರೋಡೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ನಟೋರಿಯಸ್ ಎ ೨ ಆರೋಪಿಯ ವಿರುದ್ಧ ಗುಜರಾತ್ ರಾಜ್ಯದಲ್ಲಿ ೩೦ಕ್ಕೂ ಹೆಚ್ಚು ದರೋಡೆ, ಸುಲಿಗೆ ಹಾಗೂ ಅಕ್ರಮ ಆಯುಧ ಸಂಗ್ರಹ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಮೂರು ರೀತಿಯ ಪ್ಲಾನ್
ಒಂದೂವರೆ ವರ್ಷಗಳಿಂದ ಮಾಲೀಕನ ಕಾರು ಚಾಲಕನಾಗಿದ್ದ ಗುಜರಾತ್ ಮೂಲದ ವ್ಯಕ್ತಿಯು ೫೦ ಲಕ್ಷ ರೂ.ಸಾಲ ಮಾಡಿಕೊಂಡಿದ್ದನು. ಈ ಸಾಲದ ಹಣವನ್ನು ತೀರಿಸಬೇಕೆಂದು ತಲೆಕೆಡಿಸಿಕೊಂಡಿದ್ದ ಈತನು ಗುಜರಾತ್‌ನಲ್ಲಿರುವ ತನ್ನ ಸ್ನೇಹಿತರಿಗೆ ಹೇಳಿದ್ದಾನೆ. ಒಂದೇ ಬಾರಿ ಕೋಟ್ಯಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಲು ಸಹಕರಿಸುವಂತೆ ಕೋರಿದ್ದನು. ಅದರಂತೆ, ಈತ ಮೂರು ಪ್ಲಾನ್ ಮಾಡಿದ್ದು, ಮಾಲನ್ನು ಸಾಗಿಸುವ ವಾಹನದ ಒಂದು ಕೀಯನ್ನು ಡೂಪ್ಲಿಕೇಟ್ ಮಾಡಿಸಿಕೊಂಡಿದ್ದರು.

ಬೆಳ್ಳಿ ಪದಾರ್ಥಗಳು ಸಾಗಿಸುವಾಗ ಎಲ್ಲಾದರೂ ಗಾಡಿ ನಿಲ್ಲಿಸಿದಾಗ ಅದನ್ನು ತೆಗೆದುಕೊಂಡು ಹೋಗುವುದು. ಎರಡನೇಯದಾಗಿ ಹೆದರಿಸಿ ಮಾಲು ದೋಚುವುದು ಅಥವಾ ಡಕಾಯಿತಿ ಮಾಡುವ ವಿಚಾರ ಹೇಳಿದ್ದನು. ಮೊದಲ ಎರಡು ಪ್ಲಾನ್ ಕೈ ಬಿಟ್ಟು ಮೂರನೇ ಪ್ಲಾನ್‌ನಂತೆ -ಕ್ಟರಿಗೆ ನುಗ್ಗಿ ಇರುವ ವಸ್ತುಗಳನ್ನು ಡಕಾಯಿತಿ ಮಾಡಲಾಯಿತೆಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಡಕಾಯಿತರ ಗ್ಯಾಂಗ್ -ಕ್ಟರಿಯಲ್ಲಿ ಇದ್ದ ಲಾಕರ್ ಅನ್ನು ಒಂದು ವೇಳೆ ಒಡೆದಿದ್ದರೆ ಮತ್ತಷ್ಟು ಪದಾರ್ಥಗಳು ದೊರೆಯುತ್ತಿದ್ದವು. ಆದರೆ, ಏನೇ ಕಸರತ್ತು ಮಾಡಿದರೂ ಲಾಕ್ ಒಡೆಯಲು ಸಾಧ್ಯವಾಗಿಲ್ಲ ಎಂದು ಆಯುಕ್ತರು ವಿವರಿಸಿದರು.

ಡಿಸಿಪಿಗಳಾದ ಬಿಂದುಮಣಿ, ಕೆ.ಎಸ್.ಸುಂದರ ರಾಜ್ ಹಾಜರಿದ್ದರು.

Tags:
error: Content is protected !!