Mysore
25
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಓದುಗರ ಪತ್ರ: ರಸ್ತೆ ದುರಸ್ತಿ  ಮಾಡಿ

ಓದುಗರ ಪತ್ರ

ಮೈಸೂರಿನ  ಕುವೆಂಪು ನಗರದ  ಕಾಂಪ್ಲೆಕ್ಸ್‌ನಿಂದ  ಕೆಎಸ್‌ಆರ್‌ಟಿಸಿ ಡಿಪೋವರೆಗಿನ  ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು  ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ.

ಸಾರ್ವಜನಿಕರಿಂದ ದೂರು ಬಂದಾಗ ಮಹಾನಗರ ಪಾಲಿಕೆಯವರು ಗುಂಡಿಗಳನ್ನು ಕಾಟಾಚಾರಕ್ಕೆ ಮುಚ್ಚುತ್ತಾರೆ,  ಆದರೆ ಒಂದು ತಿಂಗಳೊಳಗೆ ಮತ್ತೆ  ಗುಂಡಿಗಳು ನಿರ್ಮಾಣವಾಗುತ್ತಿವೆ,  ಇದರಿಂದಾಗಿ  ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ.

ಈ ರಸ್ತೆಯ ಫುಟ್‌ಪಾತ್ ಅನ್ನು  ತರಕಾರಿ ಮತ್ತು ಹಣ್ಣು ಮಾರುವವರು ಆಕ್ರಮಿಸಿ ಕೊಂಡಿರುವುದರಿಂದ ವಾಹನ ಸಂಚಾರಕ್ಕೆ  ತೊಂದರೆಯಾಗುತ್ತಿದೆ. ಹೆಚ್ಚಿನ ಅನಾಹುತಗಳು ಸಂಭವಿಸುವ ಮುನ್ನ ಸಂಬಂಧಪಟ್ಟವರು ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಹಾಗೂ ಫುಟ್‌ಪಾತ್ ಒತ್ತುವರಿ ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.

 – ಬೂಕನಕೆರೆ ವಿಜೇಂದ್ರ,   ಕುವೆಂಪು ನಗರ, ಮೈಸೂರು

 

Tags:
error: Content is protected !!