Mysore
15
scattered clouds

Social Media

ಶನಿವಾರ, 24 ಜನವರಿ 2026
Light
Dark

‘ಸು ಫ್ರಮ್‍ ಸೋ’ ನೋಡಿ ಮೆಚ್ಚಿದ ಅಜಯ್‍ ದೇವಗನ್‍

su from so

ಜುಲೈ.25ರಂದು ಬಿಡುಗಡೆಯಾದ ‘ಸು ಫ್ರಮ್ ಸೋ’ ಚಿತ್ರವು 60 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಮಧ್ಯೆ, ಬಾಲಿವುಡ್‍ ನಟ ಅಜಯ್ ದೇವಗನ್‍ ಚಿತ್ರ ನೋಡಿ ಮೆಚ್ಚಿದ್ದಾರೆ.

ಈ ಕುರಿತು ಸೋಷಿಯಲ್‍ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಚಿತ್ರದ ನಾಯಕ ಮತ್ತು ನಿರ್ದೇಶಕ ಜೆ.ಪಿ.ತುಮಿನಾಡು, ‘ಅಜಯ್‍ ದೇವಗನ್‍ ಅವರು ನಮ್ಮ ಚಿತ್ರವನ್ನು ನೋಡಿ ಮೆಚ್ಚಿಕೊಂಡು, ನಮ್ಮನ್ನು ಕರೆಸಿಕೊಂಡು ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅವರ ಅದ್ಭುತ ವ್ಯಕ್ತಿತ್ವವನ್ನು ಕಣ್ಣಾರೆ ನೋಡುವಂತಾಯಿತು. ಅವರಿಗೆ ಹೃತ್ಫೂರ್ವಕ ಗೌರವಗಳು’ ಎಂದು ಬರೆದುಕೊಂಡಿದ್ದಾರೆ.

ಜುಲೈ 25ರಂದು ಬಿಡುಗಡೆಯಾದ ‘ಸು ಫ್ರಮ್ ಸೋ’ ಚಿತ್ರವು 60 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡಿದೆ. ಈ ಪೈಕಿ, ಕರ್ನಾಟಕದಲ್ಲಿ ಮೊದಲ ವಾರ 18 ಕೋಟಿ ರೂ. ಗಳಿಸಿದ್ದು, ಒಟ್ಟಾರೆ 50 ಕೋಟಿ ರೂ. ಗಳಿಕೆ ಕನ್ನಡದಿಂದಲೇ ಬಂದಿದೆ. ಮಿಕ್ಕಂತೆ ಚಿತ್ರವು ಮಲಯಾಳಂ ಮತ್ತು ತೆಲುಗು ಭಾಷೆಗಳಿಗೂ ಡಬ್‍ ಆಗಿದ್ದು, ಅಲ್ಲಿಯೂ ಒಳ್ಳೆಯ ಗಳಿಕೆ ಮಾಡುತ್ತಿದೆ. ಒಟ್ಟಾರೆ, ಈ ಚಿತ್ರವು ಇಲ್ಲಿಯವರೆಗೂ 63 ಕೋಟಿ ರೂ.ವರೆಗೂ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ.

‘ಸು ಫ್ರಮ್‍ ಸೋ’ ಚಿತ್ರದಲ್ಲಿ ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಮುಂತಾದವರು ನಟಿಸಿದ್ದಾರೆ. ಚಂದ್ರಶೇಖರ್ ಅವರ ಛಾಯಾಗ್ರಹಣ, ಸುಮೇಧ್ ಕೆ ಅವರ ಸಂಗೀತ ಈ ಚಿತ್ರಕ್ಕಿದೆ.

Tags:
error: Content is protected !!