Mysore
18
few clouds

Social Media

ಶುಕ್ರವಾರ, 30 ಜನವರಿ 2026
Light
Dark

ಓದುಗರ ಪತ್ರ: ಒಳ ಮೀಸಲಾತಿ ಜಾರಿ ವಿಳಂಬ: ಸರ್ಧಾರ್ಥಿಗಳ ಬದುಕು ಅತಂತ್ರ 

ಓದುಗರ ಪತ್ರ

ನಾಗಮೋಹನದಾಸ್ ಏಕ ಸದಸ್ಯ ಆಯೋಗವು ಒಳ ಮೀಸಲಾತಿ ಕುರಿತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರೂ ಈ ವರದಿಯನ್ನು ಜಾರಿಗೆ ತರಲು ಸರ್ಕಾರ ವಿಳಂಬ ಮಾಡುತ್ತಿರುವ ಕಾರಣ ರಾಜ್ಯದ ಲಕ್ಷಾಂತರ ಸ್ಪರ್ಧಾರ್ಥಿಗಳ ಬದುಕು ಅತಂತ್ರಗೊಂಡಿದೆ.

ಬದುಕು ಕಟ್ಟಿಕೊಳ್ಳಲು ಮನೆ ಮಠ ಹಾಗೂ ಊರು ಬಿಟ್ಟು ಸರ್ಕಾರಿ ಉದ್ಯೋಗ ಪಡೆಯಲು ಸಾಕಷ್ಟು ಸ್ಪರ್ಧಾ ಆಕಾಂಕ್ಷಿಗಳು  ಹಂಬಲಿಸುತ್ತಿದ್ದಾರೆ. ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ಏಕ ಸದಸ್ಯ ಆಯೋಗ ರಚನೆಯಾದ ದಿನದಿಂದ ಸರ್ಕಾರ ನೇಮಕಾತಿಗಳ ಅಽಸೂಚನೆಗೆ ತಡೆ ಹಿಡಿದಿರುವುದು ಸ್ಪರ್ಧಾರ್ಥಿಗಳು ಅತಂತ್ರ ಗೊಳ್ಳುವಂತೆ ಮಾಡಿದೆ.

ರಾಜ್ಯ ಸರ್ಕಾರವು ಸ್ಪರ್ಧಾರ್ಥಿಗಳ ಹಿತದೃಷ್ಟಿಯಿಂದ ತಕ್ಷಣ ಒಳ ಮೀಸಲಾತಿಯನ್ನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರದ ವಿವಿಧಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಽಸೂಚನೆಯನ್ನು ಹೊರಡಿಸುವುದರ ಜೊತೆಗೆ ವಯೋಮಿತಿಯಲ್ಲೂ ಸಡಿಲಿಕೆ ಮಾಡಬೇಕಿದೆ.

– ಪವನ್ ಜಯರಾಂ, ಸಿದ್ದಯ್ಯನಪುರ, ಚಾಮರಾಜನಗರ

Tags:
error: Content is protected !!