ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಮೆರುಗು ತಂದುಕೊಟ್ಟಿದ್ದ ಸಾಂಸ್ಕೃತಿಕ ನಗರಿಯ ಪರಂಪರೆ ಸಾರುವ ನಾಡ ಕುಸ್ತಿ ಕಲೆಯನ್ನು ಉಳಿಸಿ ಬೆಳೆಸುವ ಕಾಳಜಿ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಇಲ್ಲವಾಗಿದೆ ಎಂದು ಹಿರಿಯ ಕುಸ್ತಿ ಪೈಲ್ವಾನರು ಕಳವಳ ವ್ಯಕ್ತಪಡಿಸಿರುವುದು ಬೇಸರದ ಸಂಗತಿ.
ಮೈಸೂರು ರಾಜ ಮನೆತನ ನೀಡಿದ ಪ್ರೋತ್ಸಾಹದಿಂದಾಗಿ ದೇಶ – ವಿದೇಶಗಳಲ್ಲಿ ಕುಸ್ತಿ ಕಲೆಯನ್ನು ಜನಪ್ರಿಯಗೊಳಿಸಿದ್ದ ಮೈಸೂರಿನ ಪೈಲ್ವಾನರ ಸಾಹಸ ಎಂದಿಗೂ ಮರೆಯಲಾಗುವುದಿಲ್ಲ. ಆದರೆ ಶ್ರೇಷ್ಠ ಪೈಲ್ವಾನರನ್ನು ನೀಡಿದ ಮೈಸೂರಿನ ಗರಡಿ ಮನೆಗಳನ್ನು ವರ್ಷದಿಂದ ವರ್ಷಕ್ಕೆ ಅವಾಸನದ ಅಂಚಿಗೆ ಸರಿಯುತ್ತಿರುವುದು ವಿಪರ್ಯಾಸವೇ ಸರಿ.
ಮಹಾರಾಜರ ಆಳ್ವಿಕೆಯಲ್ಲಿ ನೂರಾರು ಕಡೆ ಇದ್ದ ಗರಡಿ ಮನೆಗಳು ಈಗ ಕೆಲವು ಕಡೆ ಮಾತ್ರ ಇವೆ. ಇನ್ನಾದರೂ ಸರ್ಕಾರ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಗರಡಿ ಮನೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಕುಸ್ತಿ ಕಲೆಯನ್ನು ಉಳಿಸಿ ಬೆಳೆಸಲು ಕ್ರಮ ಕೈಗೊಳ್ಳಬೇಕು.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





