Mysore
25
few clouds

Social Media

ಶನಿವಾರ, 24 ಜನವರಿ 2026
Light
Dark

ಭೂತಬಂಗಲೆಯಂತೆ ಕಾಣುವ ಅಂಗನವಾಡಿ ಕೇಂದ್ರದಲ್ಲೇ ಮಕ್ಕಳಿಗೆ ಪಾಠ: ಪೋಷಕರ ಆಕ್ರೋಶ

anganbvadi

ಎಚ್.ಡಿ.ಕೋಟೆ: ಭೂತದ ಬಂಗಲೆಯಂತೆ ಕಾಣುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಆಟ, ಊಟ ಹಾಗೂ ಪಾಠ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಮೊತ್ತ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗಿಡ-ಗಂಟೆ, ಹುಳ ಉಪ್ಪಟಗಳು, ಹಾವು- ಚೇಳುಗಳ ನಡುವೆಯೇ ಚಿಕ್ಕ ಮಕ್ಕಳು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಂಗನವಾಡಿ ಕೇಂದ್ರವಂತೂ ಭೂತಬಂಗಲೆಯಂತೆ ಕಾಣುತ್ತಿದ್ದು, ಅಂಗನವಾಡಿ ಕೇಂದ್ರ ಶುಚಿಗೊಳಿಸಿ ಎಂದು ಕೇಳಿದ್ರೂ ನೂ ಯೂಸ್‌ ಎನ್ನುವಂತಾಗಿದೆ.

ಅಂಗನವಾಡಿಗೆ ನಿತ್ಯ ಸುಮಾರು ಹತ್ತಕ್ಕೂ ಹೆಚ್ಚು ಮಕ್ಕಳು ಬರುತ್ತಿದ್ದು, ಹೆಚ್ಚಿನ ಅನಾಹುತ ಆಗುವುದಕ್ಕಿಂತಲೂ ಮುಂಚೆ ಗಿಡ ಗಂಟೆ ಕೀಳಿಸಿ, ಮಕ್ಕಳ ಹಿತ ಕಾಪಾಡಿ ಎಂದು ಪೋಷಕರು ಮನವಿ ಮಾಡಿದ್ದಾರೆ.

Tags:
error: Content is protected !!