Mysore
25
overcast clouds

Social Media

ಶುಕ್ರವಾರ, 10 ಏಪ್ರಿಲ 2026
Light
Dark

ಪ್ರಿಯಾಂಕ್‌ ಖರ್ಗೆಗೆ ಟಕ್ಕರ್‌ ಕೊಟ್ಟ ಆರ್‌.ಅಶೋಕ್: ಏನದು ಗೊತ್ತಾ?

priyanka kharghe

ಬೆಂಗಳೂರು: ಮೆಟ್ರೋ ರೈಲು ಉದ್ಘಾಟನಾ ಕಾರ್ಯಕ್ರಮಕ್ಕೆ ತಮ್ಮನ್ನು ಕಡೆಗಣಿಸಿದ್ದಾರೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ತಿರುಗೇಟು ನೀಡಿರುವ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮೊದಲು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಗಮನ ಹರಿಸಿ ಎಂದು ಠಕ್ಕರ್ ಕೊಟ್ಟಿದ್ದಾರೆ.

ಈ ಸಂಬಂಧ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯವರೇ ಇದೇ ಆತುರ, ಕಾತುರ, ಅವಸರ, ಹಂಬಲ, ಹಾತೊರೆ, ಉತ್ಸಾಹ, ಕುತೂಹಲಗಳನ್ನು ತಾವು ಮತ್ತು ತಮ್ಮ ಕುಟುಂಬ ರಿಪಬ್ಲಿಕ್ ಆಫ್ ಕಲಬುರಗಿ ಸೃಷ್ಟಿ ಮಾಡಿಕೊಳ್ಳುವ ಬದಲು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ತೋರಿಸಿದ್ದರೆ ಇಂದು ಆ ಭಾಗ ಅಷ್ಟು ಹಿಂದೆ ಉಳಿಯುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Tags:
error: Content is protected !!