Mysore
18
few clouds

Social Media

ಮಂಗಳವಾರ, 27 ಜನವರಿ 2026
Light
Dark

ಓದುಗರ ಪತ್ರ: ವಾಹನ ಸವಾರರು ಸಂಚಾರ ನಿಯಮ ಪಾಲಿಸಲಿ

ಓದುಗರ ಪತ್ರ

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪಾದಚಾರಿಗಳು ರಸ್ತೆದಾಟುವುದಕ್ಕಾಗಿ ಇರುವ ಜೀಬ್ರಾ ಕ್ರಾಸ್ ಗಳ ಮೇಲೆ ರಾಜ್ಯ ಸಾರಿಗೆ ಬಸ್ಸುಗಳು ಹಾಗೂ ಇತರ ಖಾಸಗಿ ವಾಹನ ಸವಾರರು ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಜೀಬ್ರಾ ಕ್ರಾಸ್ ಬಳಸದೆ ರಸ್ತೆ ದಾಟುವಾಗ ಪಾದಚಾರಿಗಳಿಗೆ ಅಪಘಾತಗಳಾಗಿವೆ.

ಇಂತಹ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸರು ಜೀಬ್ರಾ ಕ್ರಾಸ್ ಮೇಲೆ ವಾಹನ ನಿಲ್ಲಿಸುವವರಿಗೆ ದುಬಾರಿ ದಂಡ ವಿಧಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ರಸ್ತೆ ದಾಟುವ ಪಾದಚಾರಿಗಳಿಗೆ ಭದ್ರತೆ ಒದಗಿಸಬೇಕು.

– ನಾಗೇಶ್, ಮಾನಸಗಂಗೋತ್ರಿ, ಮೈಸೂರು

Tags:
error: Content is protected !!