Mysore
23
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ಪ್ರಜ್ವಲ್‌ ರೇವಣ್ಣಗೆ ಇಂದಿನಿಂದ ಬಿಳಿ ಸಮವಸ್ತ್ರ: 8 ಗಂಟೆ ಕೆಲಸ ಹಂಚಿಕೆ

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸಜಾಬಂಧಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಕೈದಿ ಸಂಖ್ಯೆ 15528 ನೀಡಲಾಗಿದ್ದು, ಇಂದಿನಿಂದ ಜೈಲಿನಲ್ಲಿ ಕೈದಿ ಸಮವಸ್ತ್ರ ಧರಿಸಬೇಕಿದೆ.

ಜೈಲಿನ ಸಜಾಬಂಧಿ ಕೈದಿಗಳ ನಿಯಮಗಳನ್ನು ಪ್ರಜ್ವಲ್‌ ರೇವಣ್ಣ ಪಾಲಿಸಬೇಕಿದ್ದು, ನಿಯಮದ ಪ್ರಕಾರ ಜೈಲು ಅಧೀಕ್ಷಕರು ನೀಡುವ ಕೆಲಸ ಮಾಡಬೇಕು. ಇಂದು ಪ್ರಜ್ವಲ್‌ ರೇವಣ್ಣ ಅವರಿಗೆ ಜೈಲಿನ ಸಿಬ್ಬಂದಿ ಬಿಳಿ ಸಮವಸ್ತ್ರ ಕೊಡಲಿದ್ದಾರೆ. ಅಪರಾಧಿ ಪ್ರಜ್ವಲ್‌ ರೇವಣ್ಣರನ್ನು ಸಜಾಬಂಧಿ ಸೆಲ್‌ಗೆ ಶಿಫ್ಟ್‌ ಮಾಡಲಾಗಿದೆ.

ಜೈಲಿನೊಳಗೆ ಪ್ರಜ್ವಲ್‌ ರೇವಣ್‌ ಎಂಟು ಗಂಟೆ ಕೆಲಸ ಮಾಡಬೇಕು. ಕರಕುಶಲ ವಸ್ತು, ಮರ ಕೆಲಸ ಸೇರಿದಂತೆ ಯಾವುದಾದರೂ ಒಂದು ಕೆಲಸ ಆಯ್ಕೆ ಮಾಡಿಕೊಳ್ಳಬೇಕಿದೆ.

ಪ್ರಜ್ವಲ್‌ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳ ಪಾವತಿಸಲಾಗುತ್ತದೆ. ಮೊದಲು ಒಂದು ವರ್ಷ ಕೌಶಲ್ಯ ರಹಿತ ಎಂದು 524 ರೂ ಸಂಬಳ ನೀಡಲಾಗುತ್ತದೆ.

ಬಳಿಕ ಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತದೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಅಧಿಕಾರಿಗಳು ಭರ್ತಿ ನೀಡಲಿದ್ದಾರೆ. ಇಷ್ಟು ದಿನ ವಿಚಾರಣಾ ಕೈದಿಯಾಗಿದ್ದ ಪ್ರಜ್ವಲ್‌ ರೇವಣ್ಣ ನಿನ್ನೆಯಿಂದ ಸಜಾಬಂಧಿಯಾಗಿದ್ದಾರೆ. ಇಂದಿನಿಂದ ಪ್ರಜ್ವಲ್‌ ರೇವಣ್ಣ ಜೀವನಶೈಲಿ ಸಂಪೂರ್ಣ ಬದಲಾಗಲಿದೆ.

Tags:
error: Content is protected !!