Mysore
21
scattered clouds

Social Media

ಶನಿವಾರ, 31 ಜನವರಿ 2026
Light
Dark

ಇಡೀ ದೇಶದಲ್ಲಿ ಆಪರೇಷನ್‌ ಸಿಂಧೂರ್‌ ವಿಜಯೋತ್ಸವ ಆಚರಿಸಲಾಗಿದೆ: ಪ್ರಧಾನಿ ನರೇಂದ್ರ ಮೋದಿ

narendra modi

ನವದೆಹಲಿ: ಸಂಸತ್‌ ಮುಂಗಾರು ಅಧಿವೇಶನದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್‌ ಸಿಂಧೂರ್‌ ಬಗ್ಗೆ ಮಾತನಾಡಿದ್ದಾರೆ.

ಆಪರೇಷನ್‌ ಸಿಂಧೂರ್‌ ಮೂಲಕ ಭಾರತೀಯ ಸೇನೆ ಶೌರ್ಯ ಪ್ರದರ್ಶಿಸಿದ್ದು, ಈ ಭಾರತದ ವಿಜಯೋತ್ಸವದ ಅಧಿವೇಶನವಾಗಿದೆ. ನನ್ನ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ. ದೇಶದ ಜನರು ನನಗೆ ಆಶೀರ್ವಾದ ಮಾಡಿದರು. ದೇಶದ ಜನತೆಗೆ ನಾನು ಧನ್ಯವಾದ ಹೇಳುತ್ತೇನೆ. ಧರ್ಮವನ್ನು ಕೇಳಿ ಹತ್ಯೆ ಮಾಡಿದ್ದವರಿಗೆ ತಕ್ಕ ಪಾಠ ಕಲಿಸಿದ್ದೇವೆ. ಪ್ರವಾಸಿಗರ ಹತ್ಯೆಗೆ ಕಾರಣರಾದವರನ್ನು ಮಟ್ಟ ಹಾಕಿದ್ದೇವೆ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಯಾರು ಭಾರತದ ಪರ ವಹಿಸುವುದಿಲ್ಲವೋ ಅವರಿಗೆ ಚೀನಾ ಕಾಣಿಸುತ್ತದೆ ಎಂದು ವಿಪಕ್ಷಗಳಿಗೆ ಟಾಂಗ್‌ ಕೊಟ್ಟರು.

ಇನ್ನು ಉಗ್ರರಿಗೆ ಕೊಟ್ಟ ಶಿಕ್ಷೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಉಗ್ರರನ್ನು ಮಣ್ಣಲ್ಲಿ ಮಣ್ಣಾಗಿಸುತ್ತೇವೆ ಎಂದಿದ್ದೆ. ನಮ್ಮ ಸೈನಿಕರು ಅದೇ ರೀತಿ ಮಾಡಿದ್ದಾರೆ. ಪಾಕ್‌ನ ಮೂಲೆ ಮೂಲೆಯಲ್ಲಿದ್ದ ಉಗ್ರರ ನೆಲೆ ಧ್ವಂಸವಾಗಿದೆ. ಅಣ್ವಸ್ತ್ರದ ಬೆದರಿಕೆಗೆ ಭಾರತ ಹೆದರುವುದಿಲ್ಲ. ಆಪರೇಷನ್‌ ಸಿಂಧೂರ್‌ನಲ್ಲಿ ಶಕ್ತಿ ಪ್ರದರ್ಶನ ಮಾಡಿದೆ. ಆಪರೇಷನ್‌ ಸಿಂಧೂರ್‌ ಸಂಪೂರ್ಣ ಯಶಸ್ವಿಯಾಗಿದೆ. ಪಾಕಿಸ್ತಾನದ ಏರ್‌ಬೇಸ್‌ಗಳು ನಾಶವಾಗಿವೆ. ಕೇವಲ 22 ನಿಮಿಷದಲ್ಲಿ ಪಾಕ್‌ಗೆ ತಕ್ಕ ಉತ್ತರ ಕೊಟ್ಟಿದ್ದೇವೆ. ಇಡೀ ದೇಶದ ಪರವಾಗಿ ಭಾರತೀಯ ಸೇನೆಗೆ ಅಭಿನಂದನೆಗಳು ಎಂದು ಸಂತಸ ವ್ಯಕ್ತಪಡಿಸಿದರು.

Tags:
error: Content is protected !!