Mysore
14
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಅಮರನಾಥ ಯಾತ್ರೆಗೆ ಹೊರಟ 1490 ಯಾತ್ರಿಕರ 27ನೇ ತಂಡ

Amarnath Yatra

ಜಮ್ಮು-ಕಾಶ್ಮೀರ: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ 3,880 ಮೀಟರ್ ಎತ್ತರದ ಅಮರನಾಥ ಗುಹಾ ದೇವಾಲಯದ ಅವಳಿ ಮೂಲ ಶಿಬಿರಗಳಿಗೆ 1490 ಯಾತ್ರಿಕರ 27ನೇ ತಂಡ ಜಮ್ಮುವಿನಿಂದ ಬಿಗಿ ಭದ್ರತಾ ವ್ಯವಸ್ಥೆಗಳ ನಡುವೆ ಹೊರಟಿತು.

ಜುಲೈ.3ರಂದು ಕಣಿವೆಯಿಂದ 38 ದಿನಗಳ ತೀರ್ಥಯಾತ್ರೆ ಪ್ರಾರಂಭವಾದಾಗಿನಿಂದ 3.86 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಗುಹಾ ದೇವಾಲಯದಲ್ಲಿರುವ ಶಿವನ ಹಿಮಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.

1,262 ಪುರುಷರು, 186 ಮಹಿಳೆಯರು, 42 ಸಾಧುಗಳು ಮತ್ತು ಸಾಧ್ವಿಗಳು ಸೇರಿದಂತೆ 27ನೇ ತಂಡವು ಭಗವತಿ ನಗರ ಮೂಲ ಶಿಬಿರದಿಂದ 61 ವಾಹನಗಳಲ್ಲಿ ಕಾಶ್ಮೀರದ ಅವಳಿ ಮೂಲ ಶಿಬಿರಗಳಿಗೆ 61 ವಾಹನಗಳಲ್ಲಿ ಸಿಆರ್‍ಪಿಎಫ್ ಮತ್ತು ಪೊಲೀಸ್ ಸಿಬ್ಬಂದಿಯ ಬೆಂಗಾವಲಿನೊಂದಿಗೆ ಬೆಳಗಿನ ಜಾವ 3:25 ರಿಂದ 3.57ರ ನಡುವೆ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

16 ವಾಹನಗಳಲ್ಲಿ 327 ಯಾತ್ರಿಕರನ್ನು ಹೊತ್ತ ಮೊದಲ ಯಾತ್ರಿಕರ ಬೆಂಗಾವಲು 14 ಕಿಮೀ ಬಾಲ್ಟಾಲ್ ಮಾರ್ಗಕ್ಕೆ, ನಂತರ 45 ವಾಹನಗಳಲ್ಲಿ 1,163 ಯಾತ್ರಿಕರ ಎರಡನೇ ಬೆಂಗಾವಲು ಯಾತ್ರೆಯನ್ನು ಕೈಗೊಂಡಿದ್ದು, ಅನಂತ್‍ನಾಗ್ ಜಿಲ್ಲೆಯ 48 ಕಿಮೀ ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗದ ಮೂಲಕ ಯಾತ್ರೆ ಕೈಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಇದರೊಂದಿಗೆ, ಜುಲೈ.2ರಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮೊದಲ ಬ್ಯಾಚ್‍ಗೆ ಚಾಲನೆ ನೀಡಿದ ನಂತರ ಒಟ್ಟು 14,27,85 ಯಾತ್ರಿಕರು ಜಮ್ಮು ಮೂಲ ಶಿಬಿರದಿಂದ ಕಣಿವೆಗೆ ತೆರಳಿದ್ದಾರೆ. ಕಳೆದ ವರ್ಷ, ನೈಸರ್ಗಿಕವಾಗಿ ರೂಪುಗೊಂಡ ಹಿಮಲಿಂಗವನ್ನು ಹೊಂದಿರುವ ಗುಹಾ ದೇವಾಲಯದಲ್ಲಿ 5.10 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಪೂಜೆ ಸಲ್ಲಿಸಿದ್ದಾರೆ. ರಕ್ಷಾಬಂಧನ ಹಬ್ಬದೊಂದಿಗೆ ಆಗಸ್ಟ್.9ರಂದು ತೀರ್ಥಯಾತ್ರೆ ಕೊನೆಗೊಳ್ಳಲಿದೆ.

Tags:
error: Content is protected !!