Mysore
26
few clouds

Social Media

ಮಂಗಳವಾರ, 27 ಜನವರಿ 2026
Light
Dark

ಮೈಸೂರಿನಲ್ಲಿ ನಾಗರಪಂಚಮಿ ಸಂಭ್ರಮ: ನಾಗರಕಲ್ಲಿಗೆ ವಿಶೇಷ ಪೂಜೆ

nagara panchami

ಮೈಸೂರು: ಹಿಂದುಗಳ ಪ್ರಮುಖ ಹಬ್ಬವಾದ ನಾಗರಪಂಚಮಿಯ ಹಿನ್ನೆಲೆಯಲ್ಲಿಂದು ಭಕ್ತರು ನಾಗರಕಲ್ಲಿಗೆ ಹಾಲಿನ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.

ದೇಶದೆಲ್ಲೆಡೆ ನಾಗರಪಂಚಮಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದ್ದು. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಪದ್ಧತಿ ಇದೆ.

ಕರ್ನಾಟಕದ ಕೆಲವು ಭಾಗಗಳಲ್ಲಿ ನಾಗರ ಕಲ್ಲುಗಳಿಗೆ ಪೂಜೆ-ಅಭಿಷೇಕ ಮಾಡಲಾಗುತ್ತದೆ. ಮತ್ತೊಂದಷ್ಟು ಪ್ರದೇಶಗಳಲ್ಲಿ ಹುತ್ತಕ್ಕೆ ಹಾಲೆರೆದು, ಅರಿಶಿಣ-ಕುಂಕುಮ ಹಾಕಿ ಪೂಜೆ ನೆರವೇರಿಸಲಾಗುತ್ತದೆ.

ನಾಗರಪಂಚಮಿಯಂದು ನಾಗನ ಪೂಜೆ ಮಾಡುವುದರಿಂದ ನಾಗ ದೋಷಗಳು ಪರಿಹಾರ ಆಗುತ್ತವೆ ಎಂಬ ನಂಬಿಕೆಯೂ ಇದೆ.

ಈ ಹಿನ್ನೆಲೆಯಲ್ಲಿ ಇಂದು ಮೈಸೂರಿನ ದೇವಾಲಯಗಳಲ್ಲಿ ನಾಗರಪಂಚಮಿಯ ಸಂಭ್ರಮ ಮನೆಮಾಡಿದ್ದು, ಮುಂಜಾನೆಯಿಂದಲೇ ದೇಗುಲಗಳಿಗೆ ಭಕ್ತರು ಭೇಟಿ ನೀಡಿ ನಾಗರಕಲ್ಲಿಗೆ ಹಾಲಿನ ಅಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

Tags:
error: Content is protected !!