Mysore
24
mist

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನಿರಾಶ್ರಿತರಿಗೆ ಹೊದಿಕೆ ವಿತರಿಸಿ ಮಾನವೀಯತೆ ಮೆರೆದ ಯುವಕರು

mysuru blankets

ಮೈಸೂರು: ಶ್ರಾವಣ ಮಾಸದ ಹಿನ್ನೆಲೆಯಲ್ಲಿ ವಿಪರೀತ ಚಳಿ ಇರುವ ಪರಿಣಾಮ ಚಾಮುಂಡೇಶ್ವರಿ ಬಳಗದ ಯುವಕರು ನಿರಾಶ್ರಿತರಿಗೆ ಹೊದಿಕೆ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಮೈಸೂರು ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಕೆ.ಆರ್.ಆಸ್ಪತ್ರೆ ಸುತ್ತಮುತ್ತ ರಸ್ತೆ ಬದಿಯಲ್ಲಿ ಮಲಗಿರುವ ನಿರಾಶ್ರಿತರು ಹಾಗೂ ಬಡವರಿಗೆ ಉಚಿತವಾಗಿ ಹೊದಿಕೆ ವಿತರಿಸುವ ಮೂಲಕ ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್ ಅವರು ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಮ್ಮ ಮೈಸೂರಿನಲ್ಲಿ ನಿರಾಶ್ರಿತರು, ಅಶಕ್ತರಲ್ಲಿ ಸ್ವಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ ಕಾರಣ ಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಎಂದು ಅವರು ಸಂಘ ಸಂಸ್ಥೆಗಳಿಗೆ ಅಥವಾ ಸರ್ಕಾರಕ್ಕೆ ಅರ್ಜಿ ಹಾಕಲ್ಲ. ಸರ್ಕಾರದವರೂ ಕೂಡ ಎಲ್ಲವನ್ನು ಸರಿದಾರಿಗೆ ತರೋದಕ್ಕೂ ಆಗುವುದಿಲ್ಲ. ಸಮಾಜವನ್ನು ಸರಿಪಡಿಸಲು ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಬಹಳ ಮುಖ್ಯ. ಅಶಕ್ತರಿರುವ ಸ್ಥಳಕ್ಕೆ ಹೋಗಿ ಹೊದಿಕೆ ವಿತರಣೆ ಕಾರ್ಯಕ್ರಮ ನಡೆಯುವ ಮಾದರಿಯಲ್ಲೇ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಲು ಶ್ರಮಿಸೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖಂಡರುಗಳಾದ ರಮೇಶ್ ರಾಮಪ್ಪ, ಜಿ ರಾಘವೇಂದ್ರ, ದಿನೇಶ್, ಎಸ್.ಎನ್.ರಾಜೇಶ್, ರವಿಚಂದ್ರ, ಭೈರತಿ ಲಿಂಗರಾಜು, ಅಮಿತ್ ಹಾಗೂ ಇನ್ನಿತರರು ಹಾಜರಿದ್ದರು.

Tags:
error: Content is protected !!