Mysore
15
clear sky

Social Media

ಶುಕ್ರವಾರ, 23 ಜನವರಿ 2026
Light
Dark

ನಿರುದ್ಯೋಗಿಗಳೇ ಉದ್ಯೋಗಮೇಳದಲ್ಲಿ ಭಾಗಿಯಾಗಿ : ಶಾಸಕ ದರ್ಶನ್‌ ಧ್ರುವನಾರಾಯಣ್‌ ಕರೆ

job fair

ನಂಜನಗೂಡು : ತಾಲ್ಲೂಕಿನ ನಿರುದ್ಯೋಗಿಗಳ ಉದ್ಯೋಗದ ಬವಣೆಯನ್ನು ನೀಗಿಸಲೆಂದೇ ಮಾಜಿ ಸಂಸದ ಆರ್. ಧ್ರುವನಾರಾಯಣ ಅವರ ಹೆಸರಲ್ಲಿ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದ್ದು ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಮೇಳದಲ್ಲಿ ಭಾಗಿಯಾಗಬೇಕೆಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ಮಾಜಿ ಸಂಸದ ಆರ್. ಧ್ರುವನಾರಾಯಣರ ಹೆಸರಲ್ಲಿ ಅವರ ಅಭಿಮಾನಿ ಬಳಗ ಇದೇ ಜುಲೈ 31 ರ ಗುರುವಾರ ನಗರದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೃಹತ್ ಉದ್ಯೋಗ ಮೇಳದ ಸಿದ್ಧತೆಯನ್ನು ಪರಿಶೀಲಿಸಿ ಅವರು ಮಾತನಾಡಿದರು.

ಶಿಕ್ಷಣ ಹಾಗೂ ಆರೋಗ್ಯ ತಮ್ಮ ತಂದೆ ಮಾಜಿ ಸಂಸದ ದಿವಂಗತ ಆರ್. ಧ್ರುವನಾರಾಯಣರ ಕನಸಾಗಿತ್ತು. ಅದನ್ನು ನನಸು ಮಾಡಲೆಂದೇ ಅವರ ಜನ್ಮ ದಿನೋತ್ಸವದ ಅಂಗವಾಗಿ ಅವರ ಅಭಿಮಾನಿಗಳು ನಗರದ ಪದವಿ ಕಾಲೇಜಿನ ಆವರಣದಲ್ಲೇ ಈ ಬಾರಿ ಉದ್ಯೋಗ ಮೇಳ ಹಾಗೂ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಈ ಮೇಳದಲ್ಲಿ ನೂರಕ್ಕೂ ಹೆಚ್ಚು ವಿವಿಧ ಕಂಪೆನಿಗಳು ಭಾಗಿಯಾಗಲಿದ್ದು ತಮಗೆ ಬೇಕಾದ ಉದ್ಯೋಗಿಗಳನ್ನು ಅವರುಗಳು ಸ್ಥಳದಲ್ಲೇ ಆಯ್ಕೆ ಮಾಡಿಕೊಳ್ಳಲಿದ್ದಾರೆ. ನಿರುದ್ಯೋಗಿಗಳ ಪಾಲಿಗೆ ಇದು ವರದಾನವಾಗಿದೆ ಎಂದರು.

ತಾಲ್ಲೂಕು ಹಾಗೂ ಜಿಲ್ಲೆಯ ನಿರುದ್ಯೋಗಿಗಳು ಈ ಮೇಳದಲ್ಲಿ ಭಾಗಿಯಾಗಿ ಉದ್ಯೋಗ ಪಡೆದುಕೊಂಡರೆ ತಂದೆ ಧ್ರುವ ಅವರ ಆಶಯ ಈಡೇರಿದಂತಾಗುತ್ತದೆ. ಅದಕ್ಕಾಗಿಯೇ ಈ ಕಾಲೇಜಿನ ಪದವಿ ವಿದ್ಯಾರ್ಥಿಗಳಿಗಾಗಿ ಸಂದರ್ಶನದ ಕುರಿತಾದ ತರಬೇತಿಯನ್ನೂ ಈಗಾಗಲೇ ನೀಡಲಾಗಿದೆ ಎಂದರು.

ಈ ಮೆಳದಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಖಾಯಂ ಉದ್ಯೋಗ ನಿರೀಕ್ಷಿಸಲಾಗಿದೆ. ಅದೇ ರೀತಿ ಉಚಿತ ಆರೋಗ್ಯ ತಪಾಸಣಾ ಶಿಬಿರವೂ ಸದುಪಯೋಗವೇಬೇಕಿದೆ ಎಂದು ಹೇಳಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧಕ್ಷ ಮಾರುತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ, ನಗರಸಭೆ ಅಧ್ಯಕ್ಷ ಮಾರುತಿ, ತಾಲ್ಲೂಕಿನ ಉಸ್ತುವಾರಿ ಹಿರೇಹಳ್ಳಿ ಸೋಮೇಶ, ನಗರಸಭಾ ಅಧ್ಯಕ್ಷ ಶ್ರೀಕಂಠ, ಸದಸ್ಯರಾದ ಪ್ರದೀಪ, ಗಾಯತ್ರಿ ಮೋಹನ್, ಎಸ್.ಪಿ.ಮಹೇಶ, ಯೋಗೀಶ, ಗಂಗಾಧರ್, ರವಿ, ದೊರೆಸ್ವಾಮಿ ನಾಯಕ, ಕಮಲೇಶ ಮತ್ತಿತರರು ಹಾಜರಿದ್ದರು.

Tags:
error: Content is protected !!