Mysore
27
scattered clouds

Social Media

ಬುಧವಾರ, 21 ಜನವರಿ 2026
Light
Dark

ನೇಣುಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ : ಕೊಲೆ ಶಂಕೆ

ಪಾಂಡವಪುರ: ಗೃಹಿಣಿಯೊಬ್ಬರು ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಯುವತಿಯ ಮನೆಯವರು ವರದಕ್ಷಿಣಿ ಕಿರುಕುಳದಿಂದ ಪತಿ ಹಾಗೂ ಅವರ ಮನೆಯವರು ಕೊಲೆಮಾಡಿದ್ದಾರೆ ಎಂದು ಆರೋಪಿಸಿ ಯುವತಿಯ ತಂದೆ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಾಲೂಕಿನ ಕೆನ್ನಾಳು ಗ್ರಾಮದ ಅಭಿನಂದನ್ ಎಂಬುವರ ಪತ್ನಿ ಪೂಜಾ(25) ನೇಣುಬಿಗಿದುಕೊಂಡು ಸಾವನ್ನಪ್ಪಿರುವ ಗೃಹಿಣಿ.

ಕೆನ್ನಾಳು ಗ್ರಾಮದ ಅಭಿನಂದನ್ ಎಂಬಾತ ಶ್ರೀರಂಗಪಟ್ಟಣದ ಬಲ್ಲೇನಹಳ್ಳಿ ಗ್ರಾಮದ ಮಂಜುನಾಥ್ ಎಂಬುವರ ಪುತ್ರಿ ಪೂಜಾ ಎಂಬ ಯುವತಿಯನ್ನು ಪ್ರೀತಿಸಿ ಪೋಷಕರ ಎದುರು ಹಾಕಿಕೊಂಡು ಎರಡು ತಿಂಗಳ ಹಿಂದೆ ಮದುವೆಯಾಗಿದ್ದರು. ಪ್ರಕರಣ ಸಂಬಂಧ ಯುವತಿಯ ತಂದೆ ಮಂಜುನಾಥ್ ಅವರು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ಯುವತಿ ನಾನು ಇಷ್ಟ ಪಟ್ಟು ಪ್ರೀತಿಸಿ ಮದುವೆಯಾಗುತ್ತಿದ್ದೇನೆ ಎಂಬುದಾಗಿ ಪೊಲೀಸ್ ಮುಂದೆ ಹೇಳಿಕೊಟ್ಟು ಅಭಿನಂದನ್ ಎಂಬ ಯುವಕನನ್ನು ಮದುವೆಯಾಗಿದ್ದಳು. ಇದೀಗ ಮದುವೆಯಾದ ಎರಡೇ ತಿಂಗಳಲ್ಲಿ ಯುವತಿ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸಾವನಪ್ಪಿದ್ದಾಳೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರಗೆ ರವಾನಿಸಿದ್ದಾರೆ.

ವಿಷಯ ತಿಳಿದ ಮೃತ ಯುವತಿ ಪೂಜಾ ಮನೆಯವರು ಸ್ಥಳಕ್ಕೆ ಆಗಮಿಸಿ ನನ್ನ ಮಗಳನ್ನು ಪತಿ ಅಭಿನಂದನ್, ಆತನ ತಮ್ಮ ಅನಿಲ್ ಹಾಗೂ ಅತ್ತೆ ಶಾಂತಮ್ಮ ಅವರು ಮಗಳಿಗೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಪತಿಯ ಮನೆಯವರು ವಿರುದ್ದ ಆಕ್ರೋಶ ಹೊರಹಾಕಿದರು. ನಂತರ ಎರಡು ಗ್ರಾಮದ ಗ್ರಾಮಸ್ಥರು, ಕುಟುಂಬರು ಬೆಳಿಗ್ಗೆಯಿಂದ ಸಂಜೆಯವರೆಗೂ ನ್ಯಾಯಾಪಂಚಾಯಿತಿ ಮಾಡುವ ಮೂಲಕ ರಾಜಿಸಂದಾನ ಮಾಡಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಲು ಎಷ್ಟೇ ಪ್ರಯತ್ನ ನಡೆಸಿದರು. ಅಂತಿಮವಾಗಿ ಬಗೆಹರಿಯಲಿಲ್ಲ. ಬಳಿಕ ಮೃತ ಯುವತಿಯ ತಂದೆ ಮಂಜುನಾಥ್ ನನ್ನ ಮಗಳಿಗೆ ಪತಿ ಮತ್ತು ಅವರ ಮನೆಯವರು ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ನಡೆಸಿ, ಕೊಲೆ ಮಾಡಿ ನೇಣುಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಮಂಜುನಾಥ್ ಅವರ ನೀಡಿದ ದೂರಿನ ಮೇರೆಗೆ ಪೊಲೀಸರು ಮೃತ ಯುವತಿ ಪೂಜಾ ಅವರ ಪತಿ ಅಭಿನಂದನ್, ಆತನ ತಮ್ಮ ಅನಿಲ್ ಹಾಗೂ ಅತ್ತೆಯ ಶಾಂತಮ್ಮ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪತಿ ಅಭಿನಂದನ್ ಹಾಗೂ ಆತನ ತಮ್ಮ ಅನಿಲ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ಮೃತ ದೇಹವನ್ನು ಶವ ಪರೀಕ್ಷೆ ನಡೆಸಿ ಯುವತಿಯ ತಂದೆ ಮನೆಯವರಿಗೆ ಒಪ್ಪಿಸಲಾಗಿದೆ.

Tags:
error: Content is protected !!