Mysore
22
overcast clouds

Social Media

ಮಂಗಳವಾರ, 27 ಜನವರಿ 2026
Light
Dark

ದಿಲ್ಲಿಗೆ ಬರುತ್ತಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ : ಹಾಂಗ್‌ ಕಾಂಗ್‌ಗೆ ವಾಪಸ್‌

ಹೊಸದಿಲ್ಲಿ : ಹಾಂಗ್ ಕಾಂಗ್ ನಿಂದ ಹೊಸದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಶಂಕಿತ ತಾಂತ್ರಿಕ ದೋಷದ ಬಗ್ಗೆ ಪೈಲಟ್ ವರದಿ ಮಾಡಿದ ನಂತರ ವಿಮಾನ ಮಧ್ಯದಲ್ಲೇ ವಾಪಸಾದ ಘಟನೆ ಸೋಮವಾರ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಬೋಯಿಂಗ್ 787-8 ಡ್ರೀಮ್‍ಲೈನರ್ ವಿಮಾನ ಎ-1315 ಸೋಮವಾರ ಬೆಳಿಗ್ಗೆ ಹಾಂಗ್ ಕಾಂಗ್‍ನಿಂದ ಹೊರಟು ಹೊಸದಿಲ್ಲಿಗೆ ತೆರಳುತ್ತಿದ್ದಾಗ ಸಮಸ್ಯೆ ಕಂಡುಬಂದಿದೆ. ಪ್ರಮಾಣಿತ ಸುರಕ್ಷತಾ ಶಿಷ್ಟಾಚಾರದ ಪ್ರಕಾರ, ಪೈಲಟ್ ತನ್ನ ಮೂಲ ಸ್ಥಳಕ್ಕೆ ಮರಳಲು ನಿರ್ಧರಿಸಿದರು. ಶಂಕಿತ ತಾಂತ್ರಿಕ ದೋಷದ ವಿವರಗಳನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ. ವಿಮಾನವು ಹಾಂಗ್ ಕಾಂಗ್‍ನಲ್ಲಿ ಸುರಕ್ಷಿತವಾಗಿ ಇಳಿದಿದೆ.

ಟೇಕ್ ಆಫ್ ಆದ 90 ನಿಮಿಷಗಳಲ್ಲಿ ಹಾಂಗ್ ಕಾಂಗ್ ವಿಮಾನ ನಿಲ್ದಾಣಕ್ಕೆ ಮರಳಿದೆ. ತಾಂತ್ರಿಕ ಸಮಸ್ಯೆಯ ಸ್ವರೂಪ ಅಥವಾ ವಿಮಾನದ ವೇಳಾಪಟ್ಟಿಯನ್ನು ಬದಲಾಯಿಸುವ ಬಗ್ಗೆ ಏರ್ ಇಂಡಿಯಾ ಇನ್ನೂ ಯಾವುದೇ ಹೇಳಿಕೆಯನ್ನು ನೀಡಿಲ್ಲ.

Tags:
error: Content is protected !!