ಟೆಲ್ ಅವೀವ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಬಿಗಡಾಯಿಸಿದ್ದು, ಈವರೆಗೆ ಎರಡೂ ದೇಶಗಳಲ್ಲಿ 80 ಮಂದಿ ಮೃತಪಟ್ಟಿದ್ದು, 320ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಮುಂಜಾನೆಯೇ ಉಭಯ ದೇಶಗಳು ಒಬ್ಬರ ಮೇಲೋಬ್ಬರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಇಸ್ರೇಲ್ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮತ್ತು ಪರಮಾಣ ಸಿಸ್ಟಮ್ ಮೇಲೆ ಸರಣಿ ದಾಳಿ ನಡೆಸಿದೆ.
ಟೆಹ್ರಾನ್‌ನಲ್ಲಿರುವ ಶಹರಾನ್ ತೈಲ ಸಂಗ್ರಹಾಗಾರವನ್ನು ಇಸ್ರೇಲ್ ಟಾರ್ಗೆಟ್ ಮಾಡಿದೆ ಎಂದು ಇರಾನ್ ಹೇಳಿದೆ. ಇಸ್ರೇಲ್ ನಗರಗಳ ಮೇಲೆ ಇರಾನ್ ಕೂಡ ದಾಳಿ ನಡೆಸಿದ್ದು, ಜೆರುಸೇಲಂ ಮತ್ತು ಟೆಲ್ ಅವೀವ್‌ನಾದ್ಯಂತ ವಾಯುದಾಳಿ ಸೈರನ್‌ಗಳು ಮೊಳಗಿವೆ.
ಇಸ್ರೇಲ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರವಾದ ಸೌತ್ ಪಾರ್ಸ್ ಕ್ಷೇತ್ರದಲ್ಲಿ ಇರಾನ್ ಉತ್ಪಾದನೆಯನ್ನು ಭಾಗಶಃ ಸ್ಥಗಿತಗೊಳಿಸಿದೆ.




