Mysore
35
overcast clouds

Social Media

ಭಾನುವಾರ, 03 ಮೇ 2026
Light
Dark

ಅಹಮದಾಬಾದ್ ವಿಮಾನ ದುರಂತ :‌ ಘಟನಾ ಸ್ಥಳ ಪರಿಶೀಲಿಸಿದ ಖರ್ಗೆ, ಡಿ.ಕೆ ಶಿವಕುಮಾರ್‌

ಅಹಮದಾಬಾದ್‌ : ಭೀಕರ ವಿಮಾನ ದುರಂತ ಸಂಭವಿಸಿದ ಸ್ಥಳವಾದ ಬಿ.ಜಿ ವೈದ್ಯಕೀಯ ಕಾಲೇಜು ವಸತಿ ಸಮುಚ್ಚಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಜೂನ್‌ 14 ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿತ ಇತರೆ ಕಾಂಗ್ರೆಸ್‌ ನಾಯಕರೊಂದಿಗೆ ಅಹಮದಾಬಾದ್‌ನ ನಾಗರಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಯಾರನ್ನಾದರೂ ದೂಷಿಸುವುದು ಸರಿಯಲ್ಲ. ಕಪ್ಪು ಪೆಟ್ಟಿಗೆ ಪತ್ತೆಯಾಗಿದೆ. ಇದರಿಂದ ಕಾರಣ ತಿಳಿದು ಬರಲಿದೆ. ಇಂತಹ ಸಮಯದಲ್ಲಿ ಯಾರೂ ಅದರ ಕ್ರೆಡಿಟ್‌ ತೆಗೆದುಕೊಳ್ಳಲು ಮುಂದಾಗಬಾರದು. ಎಲ್ಲರಿಗೂ ಸರಿಯಾದ ರೀತಿಯಲ್ಲಿ ಪರಿಹಾರ ದೊರೆಯಲಿ ಎಂದು ಇದೇ ವೇಳೆ ಸುದ್ದಿಗಾರರರಿಗೆ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್‌, ಪಕ್ಷದ ಪರವಾಗಿ ಎಲ್ಲಾ ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಲು ಬಂದಿದ್ದೇವೆ. ಈ ಘಟನೆ ಬಗ್ಗೆ ನಮಗೆ ಅಪಾರ ದುಖಃವಾಗಿದೆ. ಬಾಕ್ಸ್‌ ಪತ್ತೆಯಾಗಿದ್ದು ವರದಿಗಾಗಿ ಕಾಯುತ್ತಿದ್ದೆವೆ. ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.

Tags:
error: Content is protected !!