Mysore
23
haze

Social Media

ಶುಕ್ರವಾರ, 30 ಜನವರಿ 2026
Light
Dark

ಬಿಳಿಕೆರೆ | ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಮುಂಡ ಪತ್ತೆ

ಹುಣಸೂರು: ತಾಲ್ಲೂಕಿನ ಬಿಳಿಕೆರೆ ಹೋಬಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಯರಹಳ್ಳಿ ಗ್ರಾಮದ ಹುಸೇನ್‌ಪುರ ಲಕ್ಷ್ಮಣತೀರ್ಥ ನದಿಯ ಏತ ನೀರಾವರಿ ಪಕ್ಕದಲ್ಲಿ ತಲೆ, ಕೈಕಾಲುಗಳಿಲ್ಲದ ಅಪರಿಚಿತ ವ್ಯಕ್ತಿಯ ಮುಂಡ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸಾರ್ವಜನಿಕರು ಇದನ್ನು ಗಮನಿಸಿ ಬಿಳಿಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಎಸ್‌ಪಿ ವಿಷ್ಣುವರ್ಧನ್, ಡಿವೈಎಸ್ಪಿ ಗೋಪಾಲಕೃಷ್ಣ, ಮಲ್ಲಿಕ್, ಸಂತೋಷ್ ಕಷ್ಯಪ್, ಸಬ್ ಇನ್ಸ್‌ಪೆಕ್ಟರ್ ಪೂಜಾ ಭೇಟಿ ನೀಡಿ ಪರಿಶೀಲಿಸಿದರು. ನಂತರ ಶವವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ:- ಕಾಲ್ತುಳಿತ ಪ್ರಕರಣ : ಐಪಿಎಲ್‌ ನಿಷೇಧಕ್ಕೆ ವಾಟಾಳ್‌ ಆಗ್ರಹ

Tags:
error: Content is protected !!