ಮೈಸೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಟಲಿಜೆನ್ಸ್ ಮುಖ್ಯಸ್ಥರನ್ನು ಅಮಾನತು ಮಾಡದೇ ವರ್ಗಾವಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು, ಈ ವಿಚಾರವನ್ನು ಖುರ್ಚಿಯ ಮೇಲೆ ಕುಳಿತ ದೊರೆಯನ್ನೇ ಕೇಳಬೇಕು. ಸಿಕ್ಕ ಸಿಕ್ಕವರಿಗೂ ಕೂಡ ಸುಣ್ಣ ಹಾಕಬೇಕು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಸರಿಯಲ್ಲ. ಸಿಎಂಗೆ ಯಾರು ಅಡ್ವೈಸ್ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಇದನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸುವುದು ಬೇಡ. ಮೂರು ತಿಂಗಳ ಒಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನು ಪೊಲೀಸ್ ಅಧಿಕಾರಿಗಳ ತಲೆದಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾರನ್ನಾದರೂ ಬಲಿಪಶು ಮಾಡಬೇಕಿತ್ತು. ಅದಕ್ಕೆ ಸರ್ಕಾರ ಯಾರನ್ನಾದರೂ ಹೊಣೆ ಮಾಡಬೇಕಿತ್ತು. ಒಂದು ಮಾಂಸದ ತುಂಡು ಬಿಸಾಕಿದಂತೆ ಬಿಸಾಕಿದ್ದಾರೆ. ದಯಾನಂದ್ ಉತ್ತಮ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರನ್ನು ಅಮಾನತ್ತು ಮಾಡಿದ್ದು ಸರಿಯಲ್ಲ.
ಇದನ್ನೂ ಓದಿ:- ನೈತಿಕತೆ ಇದ್ದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಎಚ್.ಡಿ.ಕುಮಾರಸ್ವಾಮಿ ಆಗ್ರಹ
ಒಬ್ಬ ಪುಟಗೋಸಿ ನನ್ ಮಗನ ಮಾತು ಕೇಳ್ತೀರಿ. ಅವನು ಲಂಡನ್‌ಗೆ ಹೋಗಬೇಕು ಎಂದು ನೀವು ಅವನ ಮಾತು ಕೇಳ್ತೀರಿ? ನೀವು ಅವನನ್ನು ಕೇಳಿ ಕಾರ್ಯಕ್ರಮ ಆಯೋಜನೆ ಮಾಡ್ತೀರಿ?ನಿಮ್ಮ ಜುಟ್ಟನ್ನು ಅವನ ಕೈಗೆ ಯಾಕೆ ಕೊಡ್ತೀರಿ? ಯಾವುದೇ ಪ್ಲಾನ್ ಮಾಡದೇ ಕಾರ್ಯಕ್ರಮ ರೂಪಿಸಿದ್ದೀರಿ. ಇದಕ್ಕೆಲ್ಲ ಸರ್ಕಾರವೇ ನೇರ ಹೊಣೆ ಎಂದು ಕಿಡಿಕಾರಿದರು.





