ಮೈಸೂರು: ಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ರಸ್ತೆ ಮಧ್ಯಯೇ ಹೊತ್ತಿ ಉರಿದ ಘಟನೆ ಬನ್ನೂರಿನಲ್ಲಿ ನಡೆದಿದೆ.
ಮೈಸೂರು ನಗರದ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ತಾಂತ್ರಿಕ ದೋಷದಿಂದಾಗಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚತ್ತ ಚಾಲಕ ರಸ್ತೆ ಪಕ್ಕಕ್ಕೆ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.
ನೋಡನೋಡುತ್ತಿದ್ದಂತೆ ಬಸ್ ತುಂಬಾ ವ್ಯಾಪಿಸಿದ ಬೆಂಕಿಗೆ ಬಸ್ ಹೊತ್ತಿ ಉರಿದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಸ್‌ನ ಅರ್ಧದಷ್ಟು ಭಾಗ ಸುಟ್ಟು ಕರಲಾಗಿದೆ.





