Mysore
24
broken clouds

Social Media

ಶನಿವಾರ, 24 ಜನವರಿ 2026
Light
Dark

ಮೈಸೂರು | ಸಿ.ಎಫ್‌.ಟಿ.ಆರ್‌.ಐನಲ್ಲಿ ಗಮನಸೆಳೆದ ವಸ್ತುಪ್ರದರ್ಶನ

cftri exhibition

ಮೈಸೂರು: ಇಕೋ ಫ್ಯಾಕ್ಟರಿ ಫೌಂಡೇಶನ್ ಸಹಯೋಗದಲ್ಲಿ ‘ಶಾಶ್ವತ ಭಾರತ ಸೇತು’ ಆಶಯದಲ್ಲಿ ಸಿಎಫ್‌ಟಿಆರ್‌ಐನಲ್ಲಿ ಏರ್ಪಡಿಸಿರುವ ವಸ್ತುಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಿತು.

ಪ್ಲಾಸ್ಟಿಕ್‌ಗಳಿಂದ ಮರು ಬಳಕೆಯ ವಸ್ತುಗಳು, ಮರದಿಂದ ಮಾಡಿದ ಗೃಹಬಳಕೆ ವಸ್ತುಗಳು, ತ್ಯಾಜ್ಯದಿಂದ ತಯಾರಿಸಿದ ದಿನನಿತ್ಯ ಉಪಯೋಗದ ವಸ್ತುಗಳು ನೋಡುಗರನ್ನು ಆಕರ್ಷಿಸಿದವು.

ಜೂ.8ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಗಮಿಸಿ ಪ್ರದರ್ಶನವನ್ನು ವೀಕ್ಷಣೆ ಮಾಡಬಹುದು. ಸಾರ್ವಜನಿಕರಿಗೆ ಜೂ.7 ಮತ್ತು 8ರಂದು ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ಅಮೃತ ಉದ್ಯಾನಕ್ಕೆ ಚಾಲನೆ
ಸಿಎಫ್‌ಟಿಆರ್‌ಐ ಸ್ಥಾಪನೆಯಾಗಿ 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನದಂದು ‘ಅಮೃತ ವನ’ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಸಂಸದ ಯದುವೀರ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 75 ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಅಮೃತ ವನವನ್ನು ನಿರ್ಮಾಣ ಮಾಡಲಾಗುತ್ತದೆ.

Tags:
error: Content is protected !!