ಮೈಸೂರು: ನಗರದ ಸಂತೇಪೇಟೆಯ ಬಾಲಾಜಿ ಮಾರ್ಕೆಟಿಂಗ್ ಮತ್ತು ರಾಮದೇವ್ ಬ್ಯಾಗ್ ಗೋದಾಮು ಹಾಗೂ ವಾರ್ಡ್ 55 ಮತ್ತು 49ರಲ್ಲಿರುವ ವಿವಿಧ ಅಂಗಡಿ ಮುಂಗಟ್ಟುಗಳ ಮೇಲೆ ದಿಢೀರ್ ದಾಳಿ ನಡೆಸಿದ ಪಾಲಿಕೆ ಅಧಿಕಾರಿಗಳು ಅಪಾರ ಪ್ರಮಾಣದ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಶಪಡಿಸಿಕೊಂಡರು.
ಮಹಾನಗರ ಪಾಲಿಕೆ ಪರಿಸರ ಅಭಿಯಂತರರಾದ ಜ್ಯೋತಿ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ರಾಮದೇವ್ ಬ್ಯಾಗ್ ಗೋದಾಮಿನಲ್ಲಿದ್ದ 450ಕೆ.ಜಿ ನಿಷೇದಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ 15 ಸಾವಿರ ರೂ. ದಂಡ ವಿಧಿಸಲಾಗಿದೆ.
ವಾರ್ಡ್ 49ರಲ್ಲಿ ಅಂಗಡಿ ಮಾಲೀಕರಿಗೆ ಒಟ್ಟು 31,000 ರೂ. ದಂಡ ವಿಧಿಸಿದರು. ದಾಳಿ ವೇಳೆ ಮಹಾನಗರಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಶಿವಪ್ರಸಾದ್, ಶೋಭಾ ಹಾಗೂ ಸೂಪರ್‌ವೈಸರ್ ಶಂಕರ್, ಆರೋಗ್ಯ ಶಾಖೆ ಸಿಬ್ಬಂದಿ ಇದ್ದರು





