Mysore
23
scattered clouds

Social Media

ಗುರುವಾರ, 22 ಜನವರಿ 2026
Light
Dark

ಹನೂರು | ಆಕಸ್ಮಿಕ ಬೆಂಕಿಗೆ ಮನೆಗೆ ಚಾವಣಿ ನಾಶ

ಹನೂರು: ಆಕಸ್ಮಿಕ ಬೆಂಕಿ ಅವಘಡದಲ್ಲಿ ಮನೆಯ ಚಾವಣಿ ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ.

ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಉಮಾಪತಿ, ಇವರ ಸಹೋದರ ಸುರೇಶ್ ಎಂಬವರಿಗೆ ಸೇರಿದ ಮನೆ ಇದಾಗಿದೆ. ಉಮಾಪತಿ ಬೆಂಗಳೂರಿನಲ್ಲಿ ವಾಸವಿದ್ದು ಸುರೇಶ್‌ರವರು ಗ್ರಾಮದ ಮನೆಯಲ್ಲಿ ವಾಸವಿರುತ್ತಿದ್ದರು.

ಸೋಮವಾರ ತಡರಾತ್ರಿ ಇದ್ದಕ್ಕಿದ್ದಂತೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಶಾಖಕ್ಕೆ ಮನೆಯಲ್ಲಿ ಮಲಗಿದ್ದ ಸುರೇಶ್ ತಪ್ಪಿಸಿಕೊಂಡು ಹೋಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಮನೆಯ ಚಾವಣಿ ಸಂಪೂರ್ಣ ಸುಟ್ಟುಹೋಗಿದೆ. ಸ್ಥಳೀಯರ ನೆರವಿನಿಂದ ಬೆಂಕಿಯನ್ನು ನಂದಿಸಿದ್ದಾರೆ.

ತಹಸಿಲ್ದಾರ್ ಭೇಟಿ: ಪಿ.ಜಿ.ಪಾಳ್ಯ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಆಕಸ್ಮಿಕ ಬೆಂಕಿಗೆ ಮನೆಯ ಚಾವಣಿ ಸುಟ್ಟು ಹೋಗಿರುವ ಬಗ್ಗೆ ಸುರೇಶ್ ರವರು ದೂರವಾಣಿ ಮುಖಾಂತರ ತಹಸಿಲ್ದಾರ್ ರವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ತಹಸಿಲ್ದಾರ್ ಗುರುಪ್ರಸಾದ್ ಹಾಗೂ ಲೊಕ್ಕನಹಳ್ಳಿ ಕಂದಾಯ ನಿರೀಕ್ಷಕ ಮಹದೇವಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ತಹಸಿಲ್ದಾರ್ ಮಾತನಾಡಿ, ಮನೆಗೆ ಸಂಬಂಽಸಿದಂತೆ ಸಮರ್ಪಕ ದಾಖಲಾತಿಗಳನ್ನು ನೀಡಿದರೆ ಪ್ರಕೃತಿ ವಿಕೋಪದಡಿ ನೀಡಲಾಗುವ ಪರಿಹಾರದ ಹಣವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಈ ವೇಳೆ ಪಿ.ಜಿ.ಪಾಳ್ಯ ಗ್ರಾಮ ಆಡಳಿತಾಽಕಾರಿ ಹಾಜರಿದ್ದರು.

Tags:
error: Content is protected !!