ಹನೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಹಣಾಹಣಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಜಯಗಳಿಸಲಿ ಎಂದು ಆರ್‌ಸಿಬಿ ಅಭಿಮಾನಿಗಳು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವ ಅಷ್ಟೋತ್ತರ ಪೂಜೆ ಮಾಡಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಿ 17 ವರ್ಷಗಳು ಪೂರ್ಣಗೊಂಡು ಹದಿನೆಂಟನೇ ವರ್ಷದ ಫೈನಲ್ ಪಂದ್ಯ ಇಂದು ನಡೆಯಲಿದ್ದು, 9 ವರ್ಷಗಳ ನಂತರ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಪ್ರವೇಶಿಸಿದೆ.
18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನ ನೀಡುತ್ತಾ ಫೈನಲ್ ಪ್ರವೇಶಿಸಿದೆ. ಇಂದು ಸಂಜೆ ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಹಣಾಹಣಿ ನಡೆಯಲಿದ್ದು, ಬೆಂಗಳೂರು ತಂಡ ಜಯಗಳಿಸಲಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಹಾಗೂ ಮಾದಪ್ಪ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪವಾಡ ಪುರುಷ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಅಭಿಮಾನಿಗಳು ಹಾಗೂ ಭಕ್ತರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿ ಶಿವ ಅಷ್ಟೋತ್ತರ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದೆ. ಆದರೆ ಇದುವರೆಗೂ ಒಮ್ಮೆಯೂ ಟ್ರೋಫಿ ಎತ್ತಿಡಿದಿಲ್ಲ. ಈ ಬಾರಿ ಟ್ರೋಫಿ ತನ್ನದಾಗಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಲು ತಂಡವು ಸಿದ್ಧವಾಗಿದೆ.
ಇದನ್ನೂ ಓದಿ:- IPL Final| ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಮದಗಜಗಳ ಗುದ್ದಾಟ: ಆರ್‌ಸಿಬಿಯೇ ಗೆಲ್ಲುವ ಭರವಸೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ ಪ್ರವೇಶಿಸಿದ್ದು. ಈ ಪಂದ್ಯಾವಳಿಯಲ್ಲಿ ಜಯಗಳಿಸಲು ಭಕ್ತರೊಬ್ಬರು ಶಿವ ಅಷ್ಟೋತ್ತರ ಪೂಜೆ ಸಲ್ಲಿಸಿದ್ದಾರೆ. ನಾವು ಸಹ ಕನ್ನಡಿಗರಾಗಿದ್ದು ನಮ್ಮ ಕರ್ನಾಟಕದ ತಂಡಕ್ಕೆ ಬೆಂಬಲ ನೀಡಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಯುವ ಪ್ರತಿಭೆಗಳಿದ್ದು ಟ್ರೋಫಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಕೋಟ್ಯಾಂತರ ಕನ್ನಡಿಗರ ಬಹುದಿನಗಳ ಕನಸು ಈ ದಿನ ಈಡೇರಲಿ ಎಂದು ನಾನು ಸಹ ಮಲೆ ಮಹದೇಶ್ವರರಲ್ಲಿ ಪ್ರಾರ್ಥಿಸುತ್ತೇನೆ. “ಈ ಬಾರಿ ಕಪ್ ನಮ್ದೇ” ಎಂಬ ಸ್ಲೋಗನ್ ಹೇಳಿ ವಿಜಯೋತ್ಸವ ಆಚರಿಸೋಣ ಎಂದರು.





