Mysore
26
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮಳೆಗೆ ಕುಸಿದ ಮನೆ : ಮೂರು ಹಸುಗಳು ಮೃತ, ಮನೆಯಲ್ಲಿದ್ದವರು ಪಾರು

House collapsed at mysuru

ಮೈಸೂರು : ಜಿಲ್ಲೆಯಲ್ಲಿ ಮಳೆ‌ ಅವಾಂತರ ಮುಂದೂರಿದಿದ್ದು ಮನೆಯೊಂದು ಕುಸಿದು ಕೊಟ್ಟಿಗೆಯಲ್ಲಿದ್ದ ಮೂರು ಹಸುಗಳು ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮುಷ್ತಾಕ್ ಅಹಮದ್ ಎಂಬುವವರಿಗೆ ಸೇರಿದ ಮನೆ ಕುಸಿದು ಹೋಗಿದ್ದು, ಮನೆಯಲ್ಲಿ ಮುಸ್ತಾಕ್ ತಂಬಾಕು ಬ್ಯಾರನ್ ನಡೆಸುತ್ತಿದ್ದನು. ಮಳೆಯ ರಭಸಕ್ಕೆ ಮನೆ ಕುಸಿದ ಪರಿಣಾಮ ಮನೆಯಲ್ಲಿದ್ದ ಬ್ಯಾರನ್ ಹಾಗೂ ಪೀಠೋಪಕರಣಗಳು ಧ್ವಂಸಗೊಂಡಿವೆ. ಸದ್ಯ ಮನೆಯಲ್ಲಿದ್ದವರು ಅದೃಷ್ಟವಶಾತ್ ಪಾರಾಗಿದ್ದಾರೆ.

ಇದೆ ವೇಳೆ ಮುಸ್ತಾಕ್ ಸರ್ಕಾರಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾನೆ. ಈ ಘಟನೆಯು ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

Tags:
error: Content is protected !!