Mysore
17
broken clouds

Social Media

ಶನಿವಾರ, 31 ಜನವರಿ 2026
Light
Dark

ಗುಂಡ್ಲುಪೇಟೆ| ಪಂಪ್‌ಸೆಟ್ ಮನೆಯಲ್ಲಿ ಅಡಗಿ ಕುಳಿತಿದ್ದ ಚಿರತೆ ಸೆರೆ

Leopard

ಗುಂಡ್ಲುಪೇಟೆ: ಪಂಪ್‌ಸೆಟ್ ಮನೆಯಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ತಾಲ್ಲೂಕಿನ ಹಂಗಳಪುರ ಗ್ರಾಮದ ಗಂಗಪ್ಪ ಎಂಬುವವರ ಶಿವಪುರ ರಸ್ತೆಯಲ್ಲಿರುವ ಪಂಪ್‌ಸೆಟ್‌ನಲ್ಲಿ ಚಿರತೆಯೊಂದು ಅಡಗಿ ಕುಳಿತಿರುವಾಗ ಗಂಗಪ್ಪ ಮೊಟಾರ್ ಆನ್ ಮಾಡಲು ತೆರಳಿದಾಗ ಚಿರತೆ ಇರುವುದನ್ನು ಗಮನಿಸಿ ಓಡಿಬಂದು ಮನೆಯ ಬಾಗಿಲು ಹಾಕಿದ್ದಾರೆ.

ನಂತರ ಗ್ರಾಮದವರು ಅಕ್ಕಪಕ್ಕದ ಜಮೀನಿನವರು ಸೇರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಸಿಬ್ಬಂದಿಗಳು ಬಲೆಯ ಮೂಲಕ ಚಿರತೆ ಸೆರೆ ಹಿಡಿದಿದ್ದಾರೆ.

ರೈತ ಗಂಗಪ್ಪ ಅವರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ಗಾಬರಿಯಾಗಿ ಕೂಗಾಡಿದ್ದರೆ ಚಿರತೆ ದಾಳಿ ಮಾಡುವ ಸಂಭವವಿತ್ತು. ತಕ್ಷಣ ಹೊರಗೆ ಬಂದು ಬಾಗಿಲು ಹಾಕಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

Tags:
error: Content is protected !!