Mysore
25
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಪರಮೇಶ್ವರ್‌ ಸಂಸ್ಥೆ ಮೇಲೆ ಇಡಿ ರೇಡ್:‌ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಫೋಟಕ ಹೇಳಿಕೆ

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಗದಗ: ಗೃಹ ಸಚಿವ ಜಿ.ಪರಮೇಶ್ವರ್‌ ಒಡೆತನದ ಸಂಸ್ಥೆಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿರುವ ಹಿಂದೆ ಕಾಂಗ್ರೆಸ್‌ ನಾಯಕರ ಕೈವಾಡವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಗದಗದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡಿ ದಾಳಿ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ. ಕೆಲ ಕಾಂಗ್ರೆಸ್‌ನ ಒಂದು ಗುಂಪು ಪರಮೇಶ್ವರ್‌ ವಿರುದ್ಧ ಇಡಿಗೆ ದೂರು ನೀಡಿದೆ. ಹೀಗಾಗಿ ಇಡಿ ದಾಳಿ ಮಾಡಿದೆ. ಕಳೆದ 2013ರಲ್ಲಿ ಪರಮೇಶ್ವರ್‌ ಅವರನ್ನು ಸೋಲಿಸಿದ್ದು ಯಾರು. ಜನ ಇತಿಹಾಸವನ್ನು ಅಷ್ಟು ಸರಳವಾಗಿ ಮರೆಯಲ್ಲ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಇದೇ ಸಿದ್ದರಾಮಯ್ಯ ಪರಮೇಶ್ವರ್‌ ಅವರನ್ನು ಸೋಲಿಸಿದರು. ಬಂಗಾರ ಕಳ್ಳತನ ಪ್ರಕರಣ ಸೇರಿದಂತೆ ಎಲ್ಲಾ ಪ್ರಕರಣದ ಬಗ್ಗೆ ತನಿಖೆ ಮಾಡುವಂತೆ ಇಡಿಗೆ ಪತ್ರ ಬರೆದವರು ಯಾರು, ಕಾಂಗ್ರೆಸ್‌ನ ಒಂದು ಗುಂಪು ಪರಮೇಶ್ವರ್‌ ಅವರ ಮೇಲೆ ಕ್ರಮ ಆಗಬೇಕು ಎಂದು ಎಲ್ಲಾ ಮಾಹಿತಿ ಕಳುಹಿಸುತ್ತಾರೆ ಎಂದು ಹೇಳಿದರು.

Tags:
error: Content is protected !!