Mysore
29
scattered clouds

Social Media

ಬುಧವಾರ, 14 ಜನವರಿ 2026
Light
Dark

ಬೇಗೂರು | ರಸ್ತೆ ಪಕ್ಕ ಉರುಳಿಬಿದ್ದ ಲಾರಿ

lorry overturned

ಬೇಗೂರು(ಗುಂಡ್ಲುಪೇಟೆ ತಾ.): ಸಮೀಪದ ತೊಂಡವಾಡಿ ಗೇಟ್‌ನ ಬಳಿ ಚಲಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಉರುಳಿಬಿದ್ದ ಘಟನೆ ನಡೆದಿದೆ.

ಮೈಸೂರಿನಿಂದ ಕೇರಳದ ಸುಲ್ತಾನ್ ಬತ್ತೇರಿಗೆ ಸಿಮೆಂಟ್ ಮೂಟೆಗಳನ್ನು ತುಂಬಿಕೊಂಡು ರಾಷ್ಟ್ರೀಯ ಹೆದ್ದಾರಿ ೭೬೬ ರ ಮೂಲಕ ಸಂಚರಿಸುತ್ತಿದ್ದ ಲಾರಿ ತೊಂಡವಾಡಿ ಗೇಟ್ ನ ಬಳಿ ಸೇತುವೆಗೆ ಡಿಕ್ಕಿಯಾಗಿ ಸೇತುವೆ ಗೋಡೆ ಮುರಿದು, ರಸ್ತೆ ಪಕ್ಕಕ್ಕೆ ಲಾರಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕ ಸಹಿತ ಯಾರಿಗೂ ಅಪಾಯವಾಗಿಲ್ಲ. ಲಾರಿ ಸಂಪೂರ್ಣ ಜಖಂ ಆಗಿದ್ದು ಮತ್ತೊಂದು ಲಾರಿಯ ಮೂಲಕ ಸಿಮೆಂಟ್ ಮೂಟೆಗಳನ್ನು ತುಂಬಿ ಕಳುಹಿಸಲಾಗಿದೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Tags:
error: Content is protected !!