ನಂಜನಗೂಡು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಂದು ತಮ್ಮ ಸ್ವಗ್ರಾಮ ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮಕ್ಕೆ ಭೇಟಿ ನೀಡಿ ತಮ್ಮ ಸ್ನೇಹಿತರ ಜೊತೆಗೂಡಿ ಸಮಯ ಕಳೆದರು.
ತಮ್ಮ ಹಳ್ಳಿಯ ಬೀದಿ ಬೀದಿಗಳಿಗೆ ಭೇಟಿ ನೀಡಿ ಸ್ನೇಹಿತರನ್ನು ಮಾತನಾಡಿಸಿ ತಮ್ಮ ಗ್ರಾಮದ ಮಕ್ಕಳೊಂದಿಗೆ ಶೆಟಲ್ ಕಾಕ್ ಆಡಿ ಖುಷಿಪಟ್ಟರು.
ಇದೇ ವೇಳೆ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿದ ಅವರು, ತಮ್ಮ ಊರಿನ ರಸ್ತೆಗಳಲ್ಲಿ ಓಡಾಡುತ್ತ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ಬಾಲ್ಯದಿಂದ ಹಿಡಿದು ಇಲ್ಲಿಯ ತನಕ ನಮ್ಮೂರಿನ ನೆನಪುಗಳು ಚೆಂದ ಮತ್ತು ಅಷ್ಟೊಂದು ಗಾಢ. ಸಾಮಾಜಿಕವಾಗಿ ನನ್ನನ್ನು ಸಾಕಷ್ಟು ಗಟ್ಟಿಯಾಗಿಸಿದ ಮತ್ತು ಅವಮಾನಗಳನ್ನು ಮೆಟ್ಟಿ ನಿಲ್ಲುವ ಅಂತಃಶಕ್ತಿಯನ್ನು ನೀಡಿದ ಊರು ಸದಾ ಕಾಲ ನನ್ನ ನೆನಪಿನ ಭಾಗವಾಗಿರುವ ಸಂಗತಿ. ಊರಿನ ಭೇಟಿ ಎಂದರೆ ನೆನಪುಗಳ ಭೇಟಿ ಮತ್ತು ಹೊತ್ತು ತರುವ ಬುತ್ತಿ ಎಂದು ಸಂತಸ ವ್ಯಕ್ತಪಡಿಸಿದರು.





