ವಿಜಯಪುರ: ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿದ ಷರತ್ತುಗಳು ಉತ್ತಮವಾಗಿವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವಿಜಯಪುರದಲ್ಲಿಂದು ಮಾತನಾಡಿದ ಅವರು, ಯುದ್ಧ ವಿರಾಮ ಘೋಷಣೆ ಮಾಡಿದ ಬಳಿಕ ಬಹಳ ಜನ ದೇಶ ಭಕ್ತರಿಗೆ ನೋವಾಗಿತ್ತು. ಈ ಹಿಂದೆ ನೆಹರೂ, ಇಂದಿರಾಗಾಂಧಿ ಮಾಡಿದ ತಪ್ಪನ್ನು ಮೋದಿ ಅವರು ಮಾಡಬಾರದು ಎನ್ನುವುದು ದೇಶದ ಜನರ ಭಾವನೆ. ಶಿಮ್ಲಾ ಒಪ್ಪಂದವನ್ನು ಪಾಕಿಸ್ತಾನ ತಾನೇ ಮಾಡಿಕೊಂಡಿದೆ. ಇಂದಿರಾ ಗಾಂಧೀ ಮಾಡಿದ ತಪ್ಪಿನಿಂದ ಲಾಹೋರ್ ನಮ್ಮ ದೇಶದ ಭಾಗವಾಗುವುದು ತಪ್ಪಿದಂತಾಯಿತು. ದೇಶದ ಜನರಿಗೆ ಮೋದಿಯವರ ಮೇಲೆ ನಂಬಿಕೆಯಿದೆ ಎಂದು ಹೇಳಿದರು.
ಇನ್ನು ನಮ್ಮ ಒಂದು ಬ್ರಹ್ಮೋಸ್ ಇದ್ದರೆ ಸಾಕು ಪಾಕಿಸ್ತಾನ ನಾಶ ಮಾಡಬಹುದು. ಪ್ರಧಾನಮಂತ್ರಿಗಳು ಇದೇ ರೀತಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ದೇಶದ ಜನ ಒಂದು ಬಾರಿ ಪಾಕಿಸ್ತಾನ ನಾಶ ಆಗುವುದನ್ನು ನೋಡಬೇಕಿದೆ. ಗಾಂಧೀಜಿ ನಮ್ಮ ರಾಷ್ಟ್ರಪಿತ ಅಲ್ಲ. ಪಾಕಿಸ್ತಾನ ರಾಷ್ಟ್ರಪಿತ ಎಂದು ವಾಗ್ದಾಳಿ ನಡೆಸಿದರು.





