Mysore
21
broken clouds

Social Media

ಗುರುವಾರ, 08 ಜನವರಿ 2026
Light
Dark

ಆಪರೇಷನ್‌ ಸಿಂದೂರ : ಟೀಂ ಮೈಸೂರು ತಂಡದಿಂದ ದೇಶಕ್ಕಾಗಿ ರ‍್ಯಾಲಿ

ಮೈಸೂರು: ಭಯೋತ್ಪಾದನೆಯ ವಿರುದ್ಧ ಭಾರತದ ಯೋಧರು ‘ಆಪರೇಷನ್ ಸಿಂಧೂರ’ ಮೂಲಕ ಪ್ರತ್ಯುತ್ತರ ನೀಡಿದ್ದಕ್ಕಾಗಿ ನಮ್ಮ ಹೆಮ್ಮೆಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಟೀಂ ಮೈಸೂರು ತಂಡದ ವತಿಯಿಂದ ‘ದೇಶಕ್ಕಾಗಿ ರ‍್ಯಾಲಿ’ ಎಂಬ ಶೀರ್ಷಿಕೆಯಡಿ ಬೈಕ್ ರ‍್ಯಾಲಿಯನ್ನು ನಡೆಸಲಾಯಿತು.

ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಜಮಾವಣೆಗೊಂಡ ನೂರಾರು ಮಂದಿ ಮೊದಲಿಗೆ ಅಕಾಲಿಕ ಮರಣಕ್ಕೆ ತುತ್ತಾದ ಪದ್ಮಶ್ರೀ ಡಾ.ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು.

ನಂತರ ಬೈಕ್ ರ‍್ಯಾಲಿಯನ್ನು ಆರಂಭಿಸಲಾಯಿತು. ನಗರದ ಗಾಂಧಿ ವೃತ್ತದಿಂದ ಆರಂಭವಾಗಿ ಸಯ್ಯಾಜಿರಾವ್ ರಸ್ತೆಯಲ್ಲಿ ಸಾಗಿ ಚಿಕ್ಕ ಗಡಿಯಾರದ ಮುಖಾಂತರ ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಮೂಲಕ ಶಾಂತಲಾ ಚಿತ್ರಮಂದಿರದ ಬಳಿ ಕೊನೆಗೂಳಿಸಲಾಯಿತು.

ಟೀಂ ಮೈಸೂರಿನ ಗೋಕುಲ್ ಗೋವರ್ಧನ್, ಯಶವಂತ್, ಕಿರಣ್ ಜೈರಾಮ್ ಗೌಡ, ಅನಿಲ್ ಜೈನ್, ಹರೀಶ್ ಬಾಬು, ಲಿಂಗರಾಜು, ರಾಮಪ್ರಸಾದ್, ಮುರುಳಿ, ನವೀನ್, ಶಿವಪ್ರಸಾದ್, ಮನೋಹರ್, ತ್ರಿಮೂರ್ತಿ, ಯತೀಶ್, ಬಾಲಕೃಷ್ಣ, ಹರೀಶ್ ಶೆಟ್ಟಿ, ಆನಂದ್, ಮಂಜುನಾಥ್, ಸುನಿಲ್, ಹೇಮಂತ್, ಮನೋಜ್, ಗಣೇಶ್, ಕೃಷ್ಣ, ಸೃಜನ್, ಸಂತೋಷ್, ಶೇಖರ್, ನವೀನ್, ತಿಲಕ್ ಹಾಗೂ ಮಹಿಳಾ ಸದಸ್ಯರಾದ ಸುಧಾ ಗೌರವ್ ಮುರುಳಿ, ಸಹನಾ, ಸುಕೃತ, ಹರ್ಷಿತ, ತನಿಷ್ಕ, ಕಲ್ಯಾಣಿ, ವರ್ಷಿಣಿ ಭಾಗವಹಿಸಿದ್ದರು.

Tags:
error: Content is protected !!