Mysore
27
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಜಾತಿಗಣತಿಗೆ ಮತ್ತಷ್ಟು ಕಾಲಾವಕಾಶ ಬೇಕಾಗಬಹುದು: ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ

ಮೈಸೂರು: ಜಾತಿಗಣತಿಗೆ ಮತ್ತಷ್ಟು ಕಾಲಾವಕಾಶ ಬೇಕಾಗಬಹುದು ಎಂದು ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಗಣತಿ ವೇಳೆ ಕೆಲವು ತಾಂತ್ರಿಕ ದೋಷ ಕಂಡು ಬಂದಿದೆ. ಪ್ರಾರಂಭದ ಎರಡು ದಿನಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಿದೆ. ಇದರಿಂದ ಗಣತಿಗೆ ಸ್ವಲ್ಪ ಅಡಚಣೆ ಆಗಿದೆ. ಹಂತ ಹಂತವಾಗಿ ತಾಂತ್ರಿಕ ದೋಷ ಸರಿಹೋಗುತ್ತಿದೆ. ಈ ತಾಂತ್ರಿಕ ದೋಷ ವಿಚಾರವನ್ನು ಆಯೋಗದ ಅಧ್ಯಕ್ಷ ನಾಗಮೋಹನ್ ದಾಸ್ ಅವರ ಗಮನಕ್ಕೂ ತಂದಿದ್ದೇವೆ.

ಸರ್ಕಾರ ಕೊಟ್ಟ ಕಾಲಾವಕಾಶದಲ್ಲಿ ಸರ್ವೆ ಪೂರ್ಣಗೊಳಿಸಲು ಕಷ್ಟಸಾಧ್ಯ. ಮೇ.21ರ ಒಳಗೆ ಸಮೀಕ್ಷೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಬಹುಶಃ ಸರ್ಕಾರದ ಕಾಲ ಮಿತಿಯೊಳಗೆ ಪೂರ್ಣಗೊಳಿಸಲು ಸಾಧ್ಯವಾಗದೆ ಇರಬಹುದು. ಸಮೀಕ್ಷೆ ಕ್ರಮಬದ್ಧವಾಗಿ ನಡೆಸಲು ಮತ್ತಷ್ಟು ಕಾಲಾವಕಾಶ ಬೇಕಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರಲ್ಲಿ ಸಮೀಕ್ಷೆಗೆ ಮತ್ತಷ್ಟು ಕಾಲಾವಕಾಶಕ್ಕಾಗಿ ಮನವಿ ಮಾಡುತ್ತೇನೆ. ಸರ್ವರೂ ಸಮೀಕ್ಷೆ ವೇಳೆ ತಮ್ಮ ಉಪ ಜಾತಿಗಳನ್ನು ಕಡ್ಡಾಯವಾಗಿ ನಮೂದಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

Tags:
error: Content is protected !!