ನವದೆಹಲಿ: ಈ ಬಾರಿ ಮೇ.27ರಂದೇ ನೈರುತ್ಯ ಮಾನ್ಸೂನ್ ಕೇರಳ ಕರಾವಳಿ ಪ್ರವೇಶ ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಜೂನ್.1ರಂದು ನೈರುತ್ಯ ಮಾನ್ಸೂನ್ ಕೇರಳವನ್ನು ಪ್ರವೇಶ ಮಾಡುವುದು ವಾಡಿಕೆ. ಆದರೆ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಈ ಬಾರಿ 5 ದಿನಗಳು ಮುಂಚೆ ನೈರುತ್ಯ ಮಾನ್ಸೂನ್ ಕೇರಳ ಕರಾವಳಿ ಪ್ರವೇಶ ಮಾಡುತ್ತಿದೆ.
ನೈರುತ್ಯ ಮಾನ್ಸೂನ್ ಕೇರಳ ಕರಾವಳಿ ಪ್ರವೇಶಿಸಿದ ಬಳಿಕ ಭಾರತದ ಮುಖ್ಯ ಭೂ ಭಾಗಗಳಿಗೆ ಮಳೆ ಆಗಮಿಸುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಭಾರತದಲ್ಲಿ ಜೂನ್ ತಿಂಗಳಿನಲ್ಲಿ ಭಾರೀ ಮಳೆಯಾಗಲಿದ್ದು, ಸೆಪ್ಟೆಂಬರ್‌ವರೆಗೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ.





