ಜಮ್ಮು-ಕಾಶ್ಮೀರ: ಭಾರತ-ಪಾಕ್ ನಡುವಿನ ಕದನ ವಿರಾಮ ಒಪ್ಪಂದವನ್ನು ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಸ್ವಾಗತಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಎರಡ್ಮೂರು ದಿನಗಳ ಹಿಂದೆಯೇ ಈ ಕದನ ವಿರಾಮ ಬಂದಿದ್ದರೆ, ಬಹುಶಃ ನಾವು ನೋಡಿದ ರಕ್ತಪಾತ ನಡೆಯುತ್ತಿರಲಿಲ್ಲ. ಕೆಲವರ ಅಮೂಲ್ಯ ಜೀವ ಸುರಕ್ಷಿತವಾಗಿರುತ್ತಿತ್ತು ಎಂದರು.
ಭಾರತ-ಪಾಕ್ ಉದ್ವಿಗ್ನತೆ ನಡುವೆ ಹಾನಿಗೊಳಗಾದವರಿಗೆ ಪರಿಹಾರ ನೀಡುವುದು ನಮ್ಮ ಕರ್ತವ್ಯವಾಗಿದೆ. ಅಮೂಲ್ಯ ಜೀವಗಳ ನಷ್ಟಕ್ಕೆ ಪರಿಹಾರ ಘೋಷಣೆ ಮಾಡಿದ್ದೇವೆ. ಈಗ ಗಾಯಗೊಂಡವರಿಗೆ ಪರಿಹಾರ ನೀಡಬೇಕಿದೆ ಎಂದರು.
ಭಾರತ ಹಾಗೂ ಪಾಕಿಸ್ತಾನದ ನಡುವಿನ ಶಾಶ್ವತ ಸ್ನೇಹಕ್ಕಾಗಿ ತಮ್ಮ ಪಕ್ಷವೂ ಯಾವಾಗಲೂ ಪ್ರತಿಪಾದಿಸುತ್ತದೆ. ಆದರೆ. ನಂಬಿಕೆಯ ಕೊರತೆಯನ್ನು ನಿವಾರಿಸುವ ಪ್ರಾಥಮಿಕ ಜವಾಬ್ದಾರಿಯು ಪಾಕಿಸ್ತಾನದ ಮೇಲಿದೆ ಎಂದು ಹೇಳಿದರು.





