Mysore
22
mist

Social Media

ಶನಿವಾರ, 27 ಡಿಸೆಂಬರ್ 2025
Light
Dark

ಶ್ರೀರಂಗಪಟ್ಟಣ | ಬಿರುಗಾಳಿ ಸಹಿತ ಸುರಿದ ಮಳೆಗೆ ನೆಲಕಚ್ಚಿದ ಬಾಳೆ

heavy rain shrirangapattana

ಶ್ರೀರಂಗಪಟ್ಟಣ: ಮಂಗಳವಾರ ರಾತ್ರಿ ತಾಲೂಕಿನಾದ್ಯಂತ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಬೃಹತ್ ಗಾತ್ರದ ಮರಗಳು, ವಿದ್ಯುತ್ ಕಂಬಗಳು ಸೇರಿದಂತೆ ಬಾಳೆ ತೋಟ ಸಂಪೂರ್ಣವಾಗಿ ಧರೆಗುಳಿರುವ ಘಟನೆ ನಡೆದಿದೆ.

ತಾಲೂಕಿನ ಕಾರೇಕುರ ಗೇಟ್ ಹಾಗೂ ಪಂಪ್‌ಹೌಸ್ ಬಳಿ ಪ್ರತ್ಯೇಕವಾಗಿ ಎರಡು ಬೃಹತ್ ಗಾತ್ರದ ನೀಲಗಿರಿ ಮರಗಳು ಮಂಗಳವಾರ ರಾತ್ರಿ 9 ಗಂಟೆ ಸಮಯದಲ್ಲಿ ನೆಲಕ್ಕುರುಳಿದ್ದು, ಇದರಿಂದ ಪಶ್ಚಿಮವಾಹಿನಿ- ಕೆಆರ್‌ಎಸ್ ರಸ್ತೆ ಸಂಪೂರ್ಣವಾಗಿ ಅಸ್ಥವೆಸ್ತಗೊಂಡಿತ್ತು. ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಹೆದ್ದಾರಿಯಲ್ಲಿ ಬಿದಿದ್ದ ಮರಗಳನ್ನು ತೆರವುಗಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಬಾಳೆ ತೋಟ ನಾಶ
ತಾಲೂಕಿನ ಅರಕೆರೆ ಗ್ರಾಮದ ಕೆ.ರಾಜು ಎಂಬುವವರಿಗೆ ಸೇರಿದ್ದ ಸುಮಾರು 2.3 ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟೆ ಬಿರುಗಾಳಿಯಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದ ಫಸಲು ಕೈಗೆ ಸಿಗುವ ವೇಳೆ ಇಂತಹ ಘಟನೆ ಸಂಬಭವಿಸಿದ್ದು ರೈತ ಕಂಗಾಲಾಗಿದ್ದಾರೆ.

ಹಾರಿದ ಕಲ್ನಾರ್ ಶೀಟ್
ತಾಲೂಕಿನ ಮಹದೇವಪುರ ಗ್ರಾಮದ ಪುಟ್ಟಸ್ವಾಮಿ ಎಂಬುವವರ ಮನೆ ಮೇಲಿನ ಸೀಟ್‌ಗಳು ಸಂಪೂರ್ಣವಾಗಿ ಹಾರಿ ಹೋಗಿದ್ದು, ಪುಟ್ಟಸ್ವಾಮಿ ಕಂಗಾಲಾಗಿದ್ದಾರೆ.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮಾತನಾಡಿ, ತಾಲೂಕಿನಾದ್ಯಂತ ಬಾರಿ ಮಳೆಯಿಂದಾಗಿ ರೈತರ ಬೆಳೆಗಳು ಸೇರಿದಂತೆ ಅನೇಕ ಮನೆಗಳು ಅನಾಹುತ ಸಂಬವಿಸಿರುವುದು ಕಂಡುಬಂದಿದೆ. ಹಾನಿಯಾಗಿರುವ ಬಗ್ಗೆ ಸೂಕ್ತ ಮಾಹಿತಿಯೊಂದಿಗೆ ಅರ್ಜಿ ನೀಡುವಂತೆ ತಿಳಿಸಲಾಗಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದಿದ್ದಾರೆ

Tags:
error: Content is protected !!