Mysore
21
clear sky

Social Media

ಸೋಮವಾರ, 02 ಮಾರ್ಚ್ 2026
Light
Dark

ಮುಗಿಯದ ವಕ್ಫ್‌ ವಿವಾದ ; ಮೈಸೂರಲ್ಲಿ ಹಾಸ್ಟೆಲ್‌ಗೆ ವಕ್ಫ್‌ ಮಂಡಳಿ ನೋಟಿಸ್‌

ಮೈಸೂರು : ಇಲ್ಲಿನ ಶಿವರಾಂಪೇಟೆಯ ಶೃಂಗಾರ ಹೋಟೆಲ್‌ ಹತ್ತಿರ ಇರುವ ಮನ್ನಾರ್‌ ಕೃಷ್ಣಶೆಟ್ಟಿ ಹಾಸ್ಟೆಲ್‌ ಗೋಡೆಗೆ ವಕ್ಫ್‌ ಆಸ್ತಿ ಎಂದು ನೋಟಿಸ್‌ ಅಂಟಿಸಲಾಗಿದೆ. ಸದ್ಯ ಈ ವಿಚಾರವಾಗಿ ಹಾಸ್ಟೆಲ್‌ ಮುಂಭಾಗ ವಕ್ಫ್‌ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ.

ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ನಾಗೇಂದ್ರ ಸೇರಿದಂತೆ ಕನ್ನಡ ಪರ ಹೋರಾಟಗಾರರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ವಕ್ಫ್ ನೋಟಿಸ್ ಗೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ವಕ್ಫ್ ವಿರುದ್ಧ ದಿಕ್ಕಾರ ಕೂಗಿದ ಪ್ರತಿಭಟನಾಕಾರರು ವಕ್ಫ್ ನಿಷೇಧ ಮಾಡುವಂತೆ ಆಗ್ರಹಿಸಿದರು.

ಬಳಿಕ ಮಾತನಾಡಿದ ಮಾಜಿ ಸಂಸದ ಪ್ರತಾಪ್‌ ಸಿಂಹ, 109 ವರ್ಷದ ಎಂ.ಕೆ ಹಾಸ್ಟೆಲ್ ಮೇಲೆ ವಕ್ಫ್ ನೋಟಿಸ್ ಅಂಟಿಸಿ ಈ ಅಸ್ತಿ ನಮಗೆ ಸೇರಿದೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಮೈಸೂರಿಗೆ ಮಹರಾಜರ ಹಿನ್ನಲೆ ಇದೆ ಹೊರತು ಹೈದರಾಲಿ, ಟಿಪ್ಪುಸುಲ್ತಾನ ಇತಿಹಾಸವಿಲ್ಲ. ವಕ್ಫ್ ಮಂಡಳಿ ಅವರು ಖಾಸಿಗೆ ಅಸ್ತಿ ಎಲ್ಲಾ ನನ್ನದ್ದು ಎಂದು ಕಬಳಿಕೆ ಮಾಡುತ್ತಿದ್ದಾರೆ. ಈ ಕಾರಣದಿಂದ ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ತಿದ್ದುಪಡಿಯನ್ನು ತಂದಿದ್ದು. ವಕ್ಫ್ ವಕ್ಫ್ ಅಂತ ರೈತರ ಆಸ್ತಿ ಕಬಳಿಸುತ್ತಿದ್ದಾರೆ ಎಂದು ವಕ್ಫ್ ಬೋರ್ಡ್ ವಿರುದ್ಧ ವಾಗ್ದಾಳಿ ನಡೆಸಿದರು.

Tags:
error: Content is protected !!